ಬೆಂಗಳೂರು: ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಈ ಇಬ್ಬರ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಜನರಿಗೆ ಸತ್ಯ ಸಂಗತಿ ಮನವರಿಕೆ ಮಾಡುತ್ತೇನೆ. ಪಕ್ಷವನ್ನು ಗೆಲ್ಲಿಸುತ್ತೇನೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಇಬ್ಬರ ವಿರುದ್ಧವೂ ಹರಿಹಾಯ್ದರು. ಕೇಂದ್ರದಲ್ಲಿ ಸಚಿವ ಸ್ಥಾನ ಅಥವಾ ಉನ್ನತ ಹುದ್ದೆ ನೀಡುತ್ತೇವೆ ಎಂದು ವರಿಷ್ಠರು ಹೇಳಿದ್ದರೂ ಶೆಟ್ಟರ್ ಕೇಳಿಲ್ಲ ಎಂದು ದೂರಿದರು.
ಶೆಟ್ಟರ್ ಅವರಿಗೆ ಪಕ್ಷ ಎಲ್ಲ ಸ್ಥಾನ ನೀಡಿತ್ತು. ಬಿ.ಬಿ.ಶಿವಪ್ಪ ಅವರನ್ನೂ ಎದುರು ಹಾಕಿಕೊಂಡು ವಿರೋಧಪಕ್ಷದ ನಾಯಕರಾಗಿ ಮಾಡಲಾಯಿತು. ನಾನು, ಅನಂತಕುಮಾರ್ ಅವರು ಶೆಟ್ಟರ್ ಪರವಾಗಿ ನಿಂತು ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು ಎಂದರು.
‘