ಬೆಂಗಳೂರು: ನಟ ಧನ್ನೀರ್ ಗೌಡಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವೈರಲ್ ಪ್ರಕರಣದಲ್ಲಿ ನಟ ಧನ್ನೀರ್ ಗೌಡಗೆ ಈಗ ಸಂಕಷ್ಟ ಎದುರಾಗಿದೆ.
ವಿಡಿಯೋ ಲೀಕ್ ಮಾಡಲು ಧನ್ನೀರ್ ಅವರ ಮೊಬೈಲ್ ಬಳಕೆಯಾಗಿರುವುದು FSLನ ಮೊಬೈಲ್ ರಿಟೀವ್ ವರದಿಯಿಂದ ಸಾಬೀತಾಗಿದೆ. ಸಾಕ್ಷ್ಯ ಲಭ್ಯವಾಗಿರುವ ಹಿನ್ನೆಲೆಯಲ್ಲಿ CCB ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ನಟನನ್ನು ಬಂಧಿಸಲು ವಾರಂಟ್ ಪಡೆಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.