LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಹಿಂದೂ ಮಹಾಗಣಪತಿ ವಿಸರ್ಜನೆ: ಕಟ್ಟಡ, ಅಂಗಡಿ ಮೇಲೇರದಂತೆ ಬೆಸ್ಕಾಂ ಎಚ್ಚರಿಕೆ

ಹಿಂದೂ ಮಹಾಗಣಪತಿ ವಿಸರ್ಜನೆ: ಕಟ್ಟಡ, ಅಂಗಡಿ ಮೇಲೇರದಂತೆ ಬೆಸ್ಕಾಂ ಎಚ್ಚರಿಕೆ

ಹಿಂದೂ ಮಹಾಗಣಪತಿ ವಿಸರ್ಜನೆ: ಕಟ್ಟಡ, ಅಂಗಡಿ ಮೇಲೇರದಂತೆ ಬೆಸ್ಕಾಂ ಎಚ್ಚರಿಕೆ

ಚಿತ್ರದುರ್ಗ: ನಗರದ ಬಿ.ಡಿ. ರಸ್ತೆಯ ಶ್ರೀ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಪ್ರತಿμÁ್ಠಪಿಸಲಾಗಿರುವ ಹಿಂದೂ ಮಹಾಗಣಪತಿ ವಿಗ್ರಹದ ವಿಸರ್ಜನಾ ಮೆರವಣಿಗೆಯು ಅಕ್ಟೋಬರ್ 3 ಶನಿವಾರ ನಡೆಯಲಿದ್ದು, ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಕಟ್ಟಡ ಹಾಗೂ ಅಂಗಡಿಗಳ ಮೇಲೆ ಜನರು ಹತ್ತದಂತೆ 'ಬೆಸ್ಕಾಂ' ಮುನ್ನೆಚ್ಚರಿಕೆ ನೀಡಿದೆ.

ಗಣೇಶ ವಿಸರ್ಜನಾ ಮೆರವಣಿಗೆಯು ಚಳ್ಳಕೆರೆ ಗೇಟ್‍ನಿಂದ ಪ್ರಾರಂಭವಾಗಿ ಬಿ.ಡಿ. ರಸ್ತೆ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆ, ಗಾಯತ್ರಿ ಸರ್ಕಲ್, ಶಾರದಮ್ಮ ಕಲ್ಯಾಣ ಮಂಟಪ ಹಾಗೂ ಕನಕ ವೃತ್ತದ ಮುಖಾಂತರ ಚಂದ್ರವಳ್ಳಿವರೆಗೆ ಸಾಗಲಿದೆ.

ಮೆರವಣಿಗೆ ಸಾಗುವ ರಸ್ತೆಯ ಬದಿಯಲ್ಲಿ ವಿದ್ಯುತ್ ಮಾರ್ಗಗಳು (ಲೈನ್‍ಗಳು) ಹಾದುಹೋಗಿವೆ. ಸಾರ್ವಜನಿಕರು ಮೆರವಣಿಗೆ ವೀಕ್ಷಿಸಲು ರಸ್ತೆ ಬದಿಯ ಮನೆ, ಅಂಗಡಿ-ಮುಂಗಟ್ಟುಗಳ ಛಾವಣಿ (ಮೇಲ್ಚಾವಣಿ) ಏರಿದಾಗ, ಆಕಸ್ಮಿಕವಾಗಿ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಿ ಅನಾಹುತ ಸಂಭವಿಸುವ ಸಾಧ್ಯತೆಯಿರುತ್ತದೆ. ಆದ್ದರಿಂದ ಸಾರ್ವಜನಿಕರು ಕಟ್ಟಡಗಳ ಮೇಲೆ ಹತ್ತದಂತೆ ಮನೆ ಹಾಗೂ ಅಂಗಡಿ ಮಾಲೀಕರು ಸೂಕ್ತ ನಿಗಾ ವಹಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ಒಂದು ವೇಳೆ ಕಟ್ಟಡಗಳ ಮೇಲೆ ಸಾರ್ವಜನಿಕರು ಹತ್ತಿ ಯಾವುದೇ ಅಹಿತಕರ ಅಥವಾ ವಿದ್ಯುತ್ ಅನಾಹುತ ಸಂಭವಿಸಿದಲ್ಲಿ, ಅದರಿಂದಾಗುವ ಪರಿಣಾಮಗಳಿಗೆ ಸಂಬಂಧಿಸಿದ ಮನೆ ಹಾಗೂ ಅಂಗಡಿ ಮಾಲೀಕರೇ ನೇರ ಹೊಣೆಗಾರರಾಗಲಿದ್ದಾರೆ ಎಂದು ಬೆಸ್ಕಾಂ ನಗರ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್ಚರಿಸಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಮ್ಮ ಶ ತ್ರು ಸಂಹಾರ ನಿಮ್ಮ ಕಣ್ಣು ಮುಂದೆ ನಿಮ್ಮ ಶತ್ರುಗಳು ಸದೆಬಡಿಯಿರಿ ನಿಮ್ಮ ತಂಟೆಗೆ ಬರುವುದಿಲ್ಲ.?ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣ: ಕೆಪಿಎಸ್‌ಸಿ ಸದಸ್ಯೆ ಗೀತಾ ಇಡಿ ವಶಕ್ಕೆ.!ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ 40 ಸಾವಿರ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 07-10-2026ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗವಕಾಶ ಸೃಜನೆಗೆ ಜಿಲ್ಲಾಧಿಕಾರಿ ಎಸ್.ರಮ್ಯ ಸೂಚನೆವಸತಿ ರಹಿತರಿಗೆ ಮನೆಗಳನ್ನು ಕಟ್ಟಿಸಿಕೊಡುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ.!ವಾಹನಗಳ ದಟ್ಟಣೆ ಇರುವ ಕಡೆ ಗುಣ ಮಟ್ಟದ ಹಂಪ್ಸ್ಗಳನ್ನು ಅಳವಡಿಸಲು ಮನವಿ.!ಆಸಿಡ್ ಸಂತ್ರಸ್ತರಿಗೆ ಮಾನಸಿಕ, ಸಾಮಾಜಿಕ ಬೆಂಬಲ ಅಗತ್ಯ : ನ್ಯಾಯಾಧೀಶರಾದ ಜಿ.ಡಿ. ಮಹಾವರ್ಕರ್ವಚನ:  -ಸೊಡ್ಡಳ ಬಾಚರಸನಿಮ್ಮ ಮಕ್ಕಳು ತುಂಬಾ ಮಂಕು ಇದ್ರೆ ಓದಲ್ಲ ಮತ್ತು ಹೇಳಿದ ಮಾತು ಕೇಳೋದಿಲ್ಲ ಅಂದರೆ ಹೀಗೆ ಮಾಡಿರಿ..!?