LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ನಾಳೆ ಸೆ.6ರಂದು ಭದ್ರೆ ಆಗಮನಕ್ಕೆ ದುರ್ಗದಲ್ಲಿ ನೀರಾವರಿ ಹೋರಾಟ ಸಮಿತಿ ಸಂಭ್ರಮ ಸಿಹಿ ಹಂಚಿ ಸಡಗರ .!

ನಾಳೆ ಸೆ.6ರಂದು ಭದ್ರೆ ಆಗಮನಕ್ಕೆ ದುರ್ಗದಲ್ಲಿ ನೀರಾವರಿ ಹೋರಾಟ ಸಮಿತಿ ಸಂಭ್ರಮ ಸಿಹಿ ಹಂಚಿ ಸಡಗರ .!

 

ಚಿತ್ರದುರ್ಗ: ಬಹು ದಶಕಗಳ ಕನಸು, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನಿರಂತರ ನಡೆಸಿದ ಹೋರಾಟದ ಫಲ ಭದ್ರೆ ಯೋಜನೆ ಜಾರಿಗೊಂಡಿದ್ದು, ಅಧಿಕೃತವಾಗಿ ಸೆ.6ರಂದು ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿಸುವ ಕಾರ್ಯ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ಸಂಜೆ ಪ್ರವಾಸಿ ಮಂದಿರ ಆವರಣದಲ್ಲಿ ಸಂಭ್ರಮೋತ್ಸವ ಆಚರಿಸಲಾಯಿತು.

ನೆರೆದಿದ್ದವರೆಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು. ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಬರಡು ನೆಲಕ್ಕೆ ನೀರುಣಿಸಬೇಕೆಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ 30 ವರ್ಷ ನಡೆಸಿದ ಹೋರಾಟದ ಫಲ ಜಿಲ್ಲೆಗೆ ಭದ್ರೆ ನೀರು ಹರಿಯುತ್ತಿದೆ. ಸುಸಂದರ್ಭವನ್ನು ಸ್ಮರಣೀಯಗೊಳಿಸಲು ತುರ್ತಾಗಿ ಸಂಭ್ರಮೋತ್ಸವ ಆಯೋಜಿಸಿರುವುದು ಸಮಯೋಜಿತ ಎಂದರು.

ಪ್ರತಿ ಜೀವಸಂಕುಲಕ್ಕೆ ನೀರು ಅಗತ್ಯ. ಆದರೆ, ನೂರಾರು ವರ್ಷಗಳ ಕಾಲ ಬರಗಾಲಕ್ಕೆ ಸಿಲುಕಿ ಬಳಲಿದ ಜಿಲ್ಲೆಯ ಜನರಿಗೆ ಭದ್ರೆ ನೀರೊಂದೇ ಆಶ್ರಯವಾಗಿತ್ತು. ಅದನ್ನು ಪಡೆದುಕೊಳ್ಳುವಲ್ಲಿ ಅನೇಕರ ಶ್ರಮ, ಹೋರಾಟ, ಛಲ ಇದೆ. ಪಿ.ಕೋದಂಡರಾಮಯ್ಯ, ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್, ಸೋಮಗುದ್ದು ರಂಗಸ್ವಾಮಿ ಹೀಗೆ ಸಹಸ್ರಾರು ಜನರು ಹೋರಾಟದ ಹಾದಿ ಸವಿಸಿದ್ದಾರೆ ಎಂದು ಸ್ಮರಿಸಿದರು. ಹೋರಾಟ ಸಮಿತಿ ಹುಟ್ಟಿ ಚಲನೆ ಪಡೆದುಕೊಂಡಾಗ ನೋಡಿ ನಕ್ಕುವರೇ ಹೆಚ್ಚು. ಭದ್ರಾ ಮೇಲ್ದಂಡೆ ಯೋಜನೆಯೆಂಬುದು ಗಗನಕುಸುಮ. ಇದು ಸಾಧ್ಯವಿಲ್ಲದ ಯೋಜನೆಯೆಂದೇ ಅಭಿಪ್ರಾಯಪಟ್ಟರು.

 ಆದರೂ ಭ್ರಮನಿರಸನಗೊಳ್ಳದೆ ಹೋರಾಟ ಮುಂದುವರಿಸಿ, ಯೋಜನೆ ಜಾರಿಗೆ ಶ್ರಮಿಸಿದ ಚಳವಳಿಗಾರರ ನಡೆ ಮಾದರಿ ಆಗಿದೆ ಎಂದರು.ಸಂಚಾಲಕ ಚಳ್ಳಕೆರೆ ಬಸವರಾಜ್ ಮಾತನಾಡಿ, ಬಂಜಗೆರೆ ಜಯಪ್ರಕಾಶ್ ಸೇರಿ ಅನೇಕರು ಮೊದಲ ಬಾರಿಗೆ ಅಧ್ಯಯನ ಕೈಗೊಂಡು, ಯೋಜನೆ ಸಾಧಕ-ಬಾಧಕ ಮನದಟ್ಟು ಮಾಡಿಕೊಂಡ ಬಳಿಕವೇ ಹೋರಾಟಕ್ಕೆ ಧುಮುಕಿದ್ದು ಎಂದು ತಿಳಿಸಿದರು.

ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಬಯಲುಸೀಮೆಗೆ ನೀರುಣಿಸುವ ಹೋರಾಟದಲ್ಲಿ ಜಿಲ್ಲೆಯ

ಜನರಿಗೆ ಗೆಲುವು ಸಿಕ್ಕಿದೆ. ಶಾಂತಿಯುತ ಮಾರ್ಗದಲ್ಲಿ ನಡೆದ ಹೋರಾಟ ಇಡೀ ನಾಡಿಗೆ ಮಾದರಿ ಎಂದು ಬಣ್ಣಿಸಿದರು. ದಸಂಸ ಮುಖಂಡ ಕೆ.ರಾಜು ಮಾತನಾಡಿ, ಆರಂಭದಿAದಲೂ ಚಳವಳಿಗಾಗಿ ಬದುಕು ಮೀಸಲಿಟ್ಟವರ ಸ್ಮರಣೆ ಮಾಡಬೇಕು. ಚಳವಳಿ ಗೆದ್ದಾಗ ಅದರ ಲಾಭ ಪಡೆಯಲು ಸಾವಿರಾರು ಮಂದಿ ಕಳ್ಳದಾರಿಯಲ್ಲಿ ಬರುತ್ತಾರೆ. ಅದಕ್ಕೆ ಅವಕಾಶ ಕೊಡದೆ ನೈಜ ಹೋರಾಟಗಾರರನ್ನು ಸ್ಮರಿಸಬೇಕೆಂದು ತಿಳಿಸಿದರು.

ವಕೀಲ ಸಿ.ಶಿವುಯಾದವ್ ಮಾತನಾಡಿ, ಹೋರಾಟದ ನೇತೃತ್ವವನ್ನು ವಹಿಸಿಕೊಂಡ ಮುನ್ನಡೆಸಿದ ಪತ್ರಕರ್ತರ ಜಾಣ್ಮೆ ವಿಸ್ಮಯ. ಭದ್ರಾ ಯೋಜನೆ ಸಾಧ್ಯವೇ ಇಲ್ಲವೆಂಬ ಅಭಿಪ್ರಾಯ ಗಟ್ಟಿಯಾಗಿ ಬೇರೂರಿದ್ದ ವೇಳೆ ಹೋರಾಟ ಕೈಗೆತ್ತಿಕೊಂಡು ಜಾರಿಯವರೆಗೂ ವಿರಮಿಸದಿರುವುದು ಪ್ರಮುಖ ಕಾರಣ ಎಂದು ತಿಳಿಸಿದರು.

ಸಂಚಾಲಕ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ, ಯೋಜನೆ ಜಾರಿ ಹೋರಾಟದಲ್ಲಿ ಜಿಲ್ಲೆಯ ಎಲ್ಲ ಮಠಾಧೀಶರು, ರಾಜಕಾರಣಿಗಳು, ನೂರಾರು ಸಂಘಟನೆಗಳ ಪದಾಧಿಕಾರಿಗಳು, ಎಲ್ಲ ಪಕ್ಷಗಳ ಸದಸ್ಯರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅದರ ಫಲವೇ ಯೋಜನೆ ಜಾರಿಗೊಂಡಿದೆ ಎಂದರು.

ಸಂಚಾಲಕ ಜೋಗಿಮಟ್ಟಿ ಈ.ಮಹೇಶಬಾಬು, ಮುಖಂಡರಾದ ಜಿ.ಯು.ನಾಗರಾಜ್ ಗೌನಹಳ್ಳಿ, ಎಂ.ಜೆ.ಪ್ರಸನ್ನ, ವೀಣಾ ಗೌರಮ್ಮ, ಕುಂಚಿಗನಾಳ್ ಮಹಾಲಿಂಗಪ್ಪ, ಅನಂತ್,

ತಿಮ್ಮಪ್ಪನಹಳ್ಳಿ ಮಂಜುನಾಥ್, ಲಕ್ಷಿö್ಮÃಕಾಂತ್, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್,

ಏಕಾಂತಪ್ಪ, ಕೆಪಿಎಂ ಗಣೇಶಯ್ಯ, ಶ್ರೀನಿವಾಸ ನಾಯ್ಕ್, ಮಹಾಂತೇಶ್, ಪ್ರದೀಪ್‌ಕುಮಾರ್,

ಪ್ರಹ್ಲಾದ್, ಗೌನಹಳ್ಳಿ ಗೋವಿಂದಪ್ಪ, ಪುರುಷೋತ್ತಮ ತೋರಣಕಟ್ಟೆ, ಕಣಿವೆ ಮಾರಮ್ಮ

ತಿಪ್ಪೇಸ್ವಾಮಿ ಇತರರಿದ್ದರು.

 

 

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಮ್ಮ ಶ ತ್ರು ಸಂಹಾರ ನಿಮ್ಮ ಕಣ್ಣು ಮುಂದೆ ನಿಮ್ಮ ಶತ್ರುಗಳು ಸದೆಬಡಿಯಿರಿ ನಿಮ್ಮ ತಂಟೆಗೆ ಬರುವುದಿಲ್ಲ.?ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣ: ಕೆಪಿಎಸ್‌ಸಿ ಸದಸ್ಯೆ ಗೀತಾ ಇಡಿ ವಶಕ್ಕೆ.!ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ 40 ಸಾವಿರ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 07-10-2026ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗವಕಾಶ ಸೃಜನೆಗೆ ಜಿಲ್ಲಾಧಿಕಾರಿ ಎಸ್.ರಮ್ಯ ಸೂಚನೆವಸತಿ ರಹಿತರಿಗೆ ಮನೆಗಳನ್ನು ಕಟ್ಟಿಸಿಕೊಡುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ.!ವಾಹನಗಳ ದಟ್ಟಣೆ ಇರುವ ಕಡೆ ಗುಣ ಮಟ್ಟದ ಹಂಪ್ಸ್ಗಳನ್ನು ಅಳವಡಿಸಲು ಮನವಿ.!ಆಸಿಡ್ ಸಂತ್ರಸ್ತರಿಗೆ ಮಾನಸಿಕ, ಸಾಮಾಜಿಕ ಬೆಂಬಲ ಅಗತ್ಯ : ನ್ಯಾಯಾಧೀಶರಾದ ಜಿ.ಡಿ. ಮಹಾವರ್ಕರ್ವಚನ:  -ಸೊಡ್ಡಳ ಬಾಚರಸನಿಮ್ಮ ಮಕ್ಕಳು ತುಂಬಾ ಮಂಕು ಇದ್ರೆ ಓದಲ್ಲ ಮತ್ತು ಹೇಳಿದ ಮಾತು ಕೇಳೋದಿಲ್ಲ ಅಂದರೆ ಹೀಗೆ ಮಾಡಿರಿ..!?