LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2273 ಹುದ್ದೆ ಖಾಲಿ : ಪದವೀಧರರಿಂದ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,273 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕದಲ್ಲಿ 211 ಹುದ್ದೆಗಳು ಲಭ್ಯವಿದ್ದು, ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ಇರುವ ತನ್ನ ವಿವಿಧ ಸರ್ಕಲ್‌ಗಳಲ್ಲಿ ಖಾಲಿ ಇರುವ ಒಟ್ಟು 2,273 ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಹುದ್ದೆಯ ವಿವರಗಳು:

ಹುದ್ದೆಯಹೆಸರು: ಸರ್ಕಲ್ ಬೇಸ್ಡ್ ಆಫೀಸರ್ : ಒಟ್ಟು ಹುದ್ದೆಗಳು: 2,273

ನಿಯಮಿತ ಹುದ್ದೆಗಳು: 2,050

ಬ್ಯಾಕ್‌ಲಾಗ್ ಹುದ್ದೆಗಳು : 223

ಕರ್ನಾಟಕದಲ್ಲಿರುವ ಹುದ್ದೆಗಳು: ಬೆಂಗಳೂರು ಸರ್ಕಲ್‌ನಲ್ಲಿ ಒಟ್ಟು 211 ಹುದ್ದೆಗಳು ಲಭ್ಯವಿವೆ (ಕನ್ನಡ ಭಾಷೆಯ ಜ್ಞಾನ ಕಡ್ಡಾಯ).

ಶೈಕ್ಷಣಿಕ ಅರ್ಹತೆ:

ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ಯಾವುದೇ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕನಿಷ್ಠ 2 ವರ್ಷಗಳ ಕಾಲ ಆಫೀಸರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ವಯೋಮಿತಿ (31-12-2025ಕ್ಕೆ ಅನ್ವಯಿಸುವಂತೆ): ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ (General) / OBC / EWS ಅಭ್ಯರ್ಥಿಗಳಿಗೆ: ₹750

SC / ST / PwBD ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 29 ಜನವರಿ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಫೆಬ್ರವರಿ 2026

ಪರೀಕ್ಷೆ ನಡೆಯುವ ಅಂದಾಜು ಸಮಯ: ಮಾರ್ಚ್ 2026

ಆಯ್ಕೆ ಪ್ರಕ್ರಿಯೆ:

ಆನ್‌ಲೈನ್ ಲಿಖಿತ ಪರೀಕ್ಷೆಸ್ಕ್ರೀನಿಂಗ್ (ದಾಖಲೆಗಳ ಪರಿಶೀಲನೆ)ಸಂದರ್ಶನ

ಸ್ಥಳೀಯ ಭಾಷಾ ಪರೀಕ್ಷೆ (ಯಾರು 10 ಅಥವಾ 12ನೇ ತರಗತಿಯಲ್ಲಿ ಸ್ಥಳೀಯ ಭಾಷೆ ಓದಿಲ್ಲವೋ ಅವರಿಗೆ ಮಾತ್ರ).

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್ sbi.co.in/careers ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾಟ ಮಂತ್ರದ ಶಕ್ತಿ ಇರುವ ವಸ್ತುಗಳನ್ನು ದಾರಿಯಲ್ಲಿ ಯಾವುದೇ ಕಾರಣಕ್ಕೂ ತುಳಿಯಬೇಡಿ ಅಕಸ್ಮಾತ್ ತುಳಿದರೆ ಸಮಸ್ಯೆ ಕತ್ತಿಟ್ಟ ಬುತ್ತಿ!ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟ.! ಇಲ್ಲಿದೆ ವಿವರದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 05-09-2026ಸೆ.6 ರಿಂದ ಭದ್ರಾ ಮೇಲ್ದಂಡೆ ಯೋಜನೆ ಐತಿಹಾಸಿಕ ಕ್ಷಣ: ಚಿತ್ರದುರ್ಗ ಶಾಖಾ ಕಾಲುವೆಗೆ ಹರಿಯಲಿದೆ ನೀರು.!-ಚೆನ್ನಬಸವಣ್ಣ ಅವರ ವಚನ.!‘ಯುವ ದಸರಾ’ ಸಂಭ್ರಮ ಚಾಲನೆಗೆ ನಟ ಪ್ರಭುದೇವ.!ಈ ಕಾರಣಕ್ಕೆ 'ಫೋಕ್ಸ್‌ವ್ಯಾಗನ್' ಸಂಸ್ಥೆಯಲ್ಲಿ 1 ಲಕ್ಷ ಉದ್ಯೋಗಗಳಿಗೆ ಕತ್ತರಿ.!ಕಾಳಿ ಮಂತ್ರದ ಪ್ರಯೋಗ! ಮಹಾಕಾಳಿ ಯಂತ್ರ ಮಂತ್ರ ಸಿದ್ಧಿಯಿಂದ ಆಕರ್ಷಣ ವಶೀಕರಣತಂತ್ರಜ್ಞಾನ ಹಾಗೂ ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಿ: -ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣೆಗೆ ಪ್ರೋತ್ಸಾಹ: ‘ಸ್ಪರ್ಶ' ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ