ಕಲಬುರುಗಿ: ಕರ್ನಾಟಕದಲ್ಲಿ ತಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಅಂತ ನರೇಂದ್ರ ಮೋದಿ ಭ್ರಮೆಯಲ್ಲಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯ ನಾಯಕರು ಭ್ರಷ್ಟರಾಗಿದ್ದಾರೆ. ಅದಕ್ಕೆ ಮೋದಿ, ನಡ್ಡಾ, ಅಮಿತ್ ಶಾರನ್ನು ಕರೆಸುತ್ತಿದ್ದಾರೆ. ಮೋದಿ 100 ಬಾರಿ ಬಂದರೂ ರಾಜ್ಯದಲ್ಲಿ ಬಿಜೆಪಿ ಗೆಲ್ಲಲ್ಲ.
ಇದು ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಅಲ್ಲ. ಸ್ಥಳೀಯ ವಿಚಾರಗಳು ಇಲ್ಲಿ ಚರ್ಚೆಯಾಗುತ್ತವೆ. ಮೋದಿ ಹೋದಲ್ಲೆಲ್ಲ ಮಾಯಮಂತ್ರ ಮಾಡಲು ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.