ಬೆಳಗಾಂ: ಸಿದ್ದರಾಮಯ್ಯ ಅವರನ್ನು ಸೋಲಿಸಲು ಯಾವ ಲೀಡರ್‌ಗಳಿಂದಲೂ ಸಾಧ್ಯವಿಲ್ಲ, ಜನರೇ ಸೋಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಲವತ್ತು ವರ್ಷಗಳಿಂದ ವರುಣಾ ಸಿದ್ದರಾಮಯ್ಯನವರ ಪರವಾಗಿ ಇರುವಂತಹ ಕ್ಷೇತ್ರ. ವರುಣಾದಲ್ಲಿ ಸೋಲುವ ಪ್ರಶ್ನೆ ಉದ್ಭವಿಸುವುದಿಲ್ಲ.
ನಾನೇ ಅಲ್ಲಿಗೆ ಪ್ರಚಾರಕ್ಕೆ ಹೋಗುತ್ತೇನೆ. ಸಿದ್ದರಾಮಯ್ಯನವರು ಅಲ್ಲಿ ಶ್ರಮ ಪಡುವ ಅವಶ್ಯಕತೆ ಇಲ್ಲ. ಗೆಲುವು ಅವರ ಪರವಾಗಿಯೇ ಇದೆ ಎಂದು ಸತೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.