ಪಂಜಾಬ್: ಶಾಲೆಯೊಂದರ ಎಲ್‍ಸಿಡಿ ಪರದೆ ಮೇಲೆ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿದ ಶಿಕ್ಷಕನನ್ನು ಪೊಲೀಸರು ಬಂಧಿಸಿರುವ ಘಟನೆ ಪಂಜಾಬ್‌ನ ಗೋಬಿಂದಪುರ ಮೊಹಲ್ಲಾದ ಸರ್ಕಾರಿ ಮಿಡಲ್ ಸ್ಮಾರ್ಟ್ ಶಾಲೆಯಲ್ಲಿ ನಡೆದಿದೆ.
ಶಿಕ್ಷಕ ಆರನೇ ತರಗತಿಯ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿದ್ದ. ಅಲ್ಲದೆ ಅಸಭ್ಯವಾಗಿ ಸನ್ನೆ ಮಾಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಶಾಲಾ ಬಾಲಕಿಯೊಬ್ಬಳ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದ್ದು, ಪೋಕ್ಸೋ ಕೇಸ್ ದಾಖಲಾಗಿದೆ.