ಹೊಳಲ್ಕೆರೆ: ಹೊಳಲ್ಕೆರೆ ವಿಧಾನಸಭಾಕ್ಷೇತ್ರದ ಮಲ್ಲಾಡಿಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಜಯಂತಿ ನಗರ, ನೆಹರು ಕಾಲೋನಿ, ಅರೇಹಳ್ಳಿ, ಗುಂಡಿಮಡು, ಮಲ್ಕಾಪುರ, ಪುಣಜೂರು, ಅಗ್ರಹಾರ ಮತ್ತು ಶಿವಪುರ ಗ್ರಾಮಗಳಲ್ಲಿ ಮಂಗಳವಾರ ಮಾಜಿ ಸಚಿವಎಚ್.ಆಂಜನೇಯ ಮನೆ ಮನೆಗೆ ತೆರೆಳಿ ಬಿರುಸಿನ ಪ್ರಚಾರಕೈಗೊಂಡರು.
ನಂತರಮತದಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವಎಚ್.ಆಂಜನೇಯ, ಕಾಂಗ್ರೆಸ್ ಪಕ್ಷರಾಜ್ಯದಲ್ಲಿಅಧಿಕಾರದಲ್ಲಿದ್ದಾಗಅನ್ನಭಾಗ್ಯ ಸೇರಿದಂತೆ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ನೀಡಿದೆ.ರೈತರು, ಮಹಿಳೆಯರು, ಶೋಷಿತರು, ಬಡವರು, ನಿರ್ಗತಿಕರ ಪರವಾಗಿರುವಕಾಂಗ್ರೆಸ್ ನಿಂದ ಮಾತ್ರ ಸಾಮಾಜಿಕನ್ಯಾಯ ನೀಡಲು ಸಾಧ್ಯ. ಹೀಗಾಗಿ ಈ ಬಾರಿಯ ವಿಧಾನಸಭಾಚುನಾವಣೆಯಲ್ಲಿನನ್ನನ್ನು ಬೆಂಬಲಿಸಿ ಆಶೀರ್ವದಿಸಿ ರಾಜ್ಯದಲ್ಲಿ ಮತ್ತೆಕಾಂಗ್ರೆಸ್ ಪಕ್ಷವನ್ನುಅಧಿಕಾರಕ್ಕೆತರಬೇಕಿದೆಎಂದು ಮನವಿ ಮಾಡಿದರು.
ಈಗಾಗಲೆ ಉಚಿತಗ್ಯಾರೆಂಟಿ ಕಾರ್ಡ್‍ಗಳನ್ನು ವಿತರಿಸಲಾಗುತ್ತಿದ್ದು, ಅದರಲ್ಲಿ ಭರವಸೆ ನೀಡಿರುವಂತೆರಾಜ್ಯದಲ್ಲಿಕಾಂಗ್ರೆಸ್ ಪಕ್ಷಅಧಿಕಾರಕ್ಕೆ ಬಂದರೆ 200 ಯೂನಿಟ್‍ಉಚಿತ ವಿದ್ಯುತ್, ಜಿ.ಎಸ್.ಟಿ.ಗಾಗಿರು.500 ಹಾಗೂ ಅಡುಗೆ ಅನಿಲಕ್ಕಾಗಿ ರು.500 ಬೆಲೆ ಏರಿಕೆಗಾಗಿರು.1000 ಸೇರಿಒಟ್ಟುರು.2000 ಸಾವಿರ
ಪ್ರತಿ ಮನೆಯ ಮಹಿಳೆಗೆ ಪ್ರತಿ ತಿಂಗಳು ನೀಡಲಾಗುವುದು.ಹಾಗೆಯೇ ನಿರುದ್ಯೋಗಿ ಪದವೀಧರರಿಗೆಮಾಸಿಕ ರು.3000 ಡಿಪ್ಲೋಮಾ ಪದವೀದರರಿಗೆ ರು.1500 ಭರವಸೆ ನೀಡಿದೆ. ನಮ್ಮದು ನುಡಿದಂತೆ ನಡೆಯುವ ಪಕ್ಷ. ಕೋಮುವಾದಿ ಬಿಜೆಪಿ.ಯಿಂದಜನ ಬೇಸತ್ತಿದ್ದು, ಕಾಂಗ್ರೆಸ್‍ಗೆರಾಜ್ಯದೆಲ್ಲೆಡೆಉತ್ತಮ ಒಲವು ವ್ಯಕ್ತವಾಗುತ್ತಿದೆಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಪಕ್ಷದ ಅನೇಕ ಮುಖಂಡರು ಮಾಜಿ ಸಚಿವಎಚ್.ಆಂಜನೇಯ ಸಮ್ಮುಖದಲ್ಲಿಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯಲೋಹಿತ್‍ಕುಮಾರ್, ಮುಖಂಡರಾದಮಂಜಣ್ಣ, ಶಿವಣ್ಣ, ದೇವರಾಜ್, ಅಶೋಕ್, ರಂಗಸ್ವಾಮಿ, ಪರಶುರಾಮ್, ಮೂರ್ತಪ್ಪ, ಚಂದ್ರಪ್ಪಇನ್ನು ಮುಂತಾದವರು ಉಪಸ್ಥಿತರಿದ್ದರು.