ದಾವಣಗೆರೆ; ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಮೇ.10 ರಂದು ಮತದಾನ ನಡೆಯುವ ದಿನದಂದು ನಡೆಯುವ ಸಂತೆ, ಜಾತ್ರೆಗಳನ್ನು ನಿಷೇದಿಸಿ ಜಿಲ್ಲಾ ದಂಡಾಧಿಕಾರಿ ಶಿವಾನಂದ ಕಾಪಶಿ ಆದೇಶಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮುಕ್ತ ಹಾಗೂ ನ್ಯಾಯೋಚಿತ ಮತದಾನ ನಡೆಸುವ ಸಲುವಾಗಿ ಹಾಗೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಮತದಾನದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಸಂತೆ, ಜಾತ್ರೆಯನ್ನು ನಿಷೇಧಿಸಿಲಾಗಿದೆ.
103-ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಳಿಚೋಡು ಗ್ರಾಮ ಮತ್ತು ಚಿಕ್ಕಮಲ್ಲನಹೊಳೆ. 105-ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆ.ಬೇವಿನಹಳ್ಳಿ ಗ್ರಾಮ ಮತ್ತು ಭಾನುವಳ್ಳಿ ಗ್ರಾಮ. 108-ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಣಬೇರು ಗ್ರಾಮ, ಲೋಕಿಕೆರೆ ಗ್ರಾಮ, ಹೊಸಹಳ್ಳಿ ಗ್ರಾಮ, ದೊಡ್ಡಘಟ್ಟ ಗ್ರಾಮ. 109-ಚನ್ನಗಿರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಲ್ಲೂರು ಗ್ರಾಮ ಹಾಗೂ ನುಗ್ಗಿಹಳ್ಳಿ ಗ್ರಾಮ. 110-ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪಟ್ಟಣ ಸೇರಿದಂತೆ ವಾರದ ಸಂತೆಯನ್ನು ನಿಷೇಧಿಸಲಾಗಿದೆ.