Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

PSI ನೇಮಕಾತಿ ಹಗರಣ ಮುಗಿಯುವವರೆಗೂ ಹೊಸ ನೇಮಕಾತಿ ಸಾಧ್ಯವಿಲ್ಲ – ಡಾ.ಜಿ.ಪರಮೇಶ್ವರ್

0

ತುಮಕೂರು : ಪಿಎಸ್‌ಐ ನೇಮಕಾತಿ ಹಗರಣ ಮುಕ್ತಾಯವಾಗುವವರೆಗೂ ಹೊಸ ನೇಮಕಾತಿ ಸಾಧ್ಯವಿಲ್ಲ. ತನಿಖೆ ಮುಕ್ತಾಯಗೊಂಡು ಸಮಸ್ಯೆ ಬಗೆಹರಿದ ಬಳಿಕವಷ್ಟೆ ಹೊಸ ನೇಮಕಾತಿ ಮಾಡಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸದಾಗಿ 400 ಪಿಎಸ್‌ಐ ಹುದ್ದೆ ನೇಮಕಾತಿಗೆ ಗೃಹ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆಯಾದರೂ ಈ ಹಿಂದಿನ ಪಿಎಸ್‌ಐ ನೇಮಕಾತಿ ಅಕ್ರಮ ಹೊಸ ನೇಮಕಾತಿಗೆ ಅಡ್ಡಿಯಾಗಿದೆ ಎಂದರು. ಹಗರಣ ತನಿಖೆ ಚುರುಕಾಗಿದ್ದು ಆದಷ್ಟು ಶೀಘ್ರವಾಗಿಯೇ ಇದನ್ನು ಬಗೆಹರಿಸುತ್ತೇವೆ, ಯಾವ ಅಭ್ಯರ್ಥಿಗಳೂ ಆತಂಕ ಪಡುವ ಅಗತ್ಯವಿಲ್ಲ ರಾಜ್ಯದಲ್ಲಿ ಒಟ್ಟು 1 ಸಾವಿರ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ ಎಂದರು.

Leave A Reply

Your email address will not be published.