[vc_row][vc_column]
BREAKING NEWS
- ಕೆಎಸ್ಒಯು ಪ್ರಶ್ನೆಪತ್ರಿಕೆ ಲೀಕ್ – ಮಂಗಳೂರು ಕೇಂದ್ರದ ಸಿಬ್ಬಂದಿಯಿಂದ ಕೃತ್ಯ?
- ಉಗ್ರನಿಗೆ ಕಾನೂನಿನಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಹೇಳಿಕೊಟ್ಟ ಜಮ್ಮು ಕಾಶ್ಮೀರದ ಡೆಪ್ಯುಟಿ ಎಸ್ಪಿ ಅರೆಸ್ಟ್
- ಕೆಲಸ ತೊರೆದ ಮಹಿಳೆ 8 ಸಾವಿರ ಕೋಟಿ ರೂ. ಮೌಲ್ಯದ ಕಂಪನಿಯ ಕಟ್ಟಿ ಬೆಳೆಸಿದರು
- ಸ್ಲೀಪ್ ಮೋಡ್ ನಿಂದ ಎಚ್ಚರವಾಗುತ್ತಾ ವಿಕ್ರಂ, ಪ್ರಗ್ಯಾನ್?
- ಭಾರತ ಕೊಟ್ಟ ಅಧ್ಯಕ್ಷೀಯ ಸೂಟ್ ನಿರಾಕರಿಸಿದ್ದ ಜಸ್ಟಿನ್ ಟ್ರುಡೋ
- ಟಿವಿ ವಾಹಿನಿಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ದೇಶನ
- ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದ 19 ವರ್ಷದ ಆಂಟಿಮ್ ಪಂಗಲ್
- ಚೈತ್ರಾ ಹೇಳಿದಂತೆ ಮಾಡಿದ್ದೀನಿ– ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡ ಅಭಿನವ ಹಾಲಶ್ರೀ..!
- ಖಾಸಗಿ ಶಾಲೆಗಳಿಗೆ ಬಿಗ್ ರಿಲೀಫ್.! ಈ ಮಾನದಂಡಗಳು ಇಲ್ಲ.!
- ಈ ಕಾರಣಕ್ಕೆ ಮೈಸೂರು ದಸರ ಸರಳ.! ಡಾ.ಹೆಚ್.ಸಿ ಮಹದೇವಪ್ಪ
ಮಂಗಳೂರು: ನರ್ಸಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬ ಏನೆಲ್ಲ ಕಳ್ಳಾಟಗಳನ್ನು ನಡೆಸಿ ಜನರನ್ನು ವಂಚಿಸಿದ್ದಾನೆ ನೋಡಿ. ತಾನು ಪೊಲೀಸ್ ಹಾಗೂ ‘ರಾ’ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ವಿದ್ಯಾರ್ಥಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಇಡುಕಿ ಮೂಲದ ಬೆನೆಡಿಕ್ಟ್ ಸಾಬು ಬಂಧಿತ ಆರೋಪಿ.
ಮಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈತ ಕೆಲವರ ಬಳಿ ತಾನು RAW ಅಧಿಕಾರಿ ಎಂದು ಹೇಳುತ್ತಿದ್ದ, ಇನ್ನು ಕೆಲವರ ಬಳಿ ತಾನು ಸಬ್ ಇನ್ಸ್ ಪೆಕ್ಟರ್ ಎಂದು ಹೇಳಿ ವಂಚಿಸುತ್ತಿದ್ದ.
6 ತಿಂಗಳ ಹಿಂದೆ ಜಿಎನ್ ಎಂ ಕೋರ್ಸ್ ಗೆ ಸೇರಿದ್ದ ಬೆನೆಡಿಕ್ ಸಾಬು ತಾನು ಕೇರಳದ ಕೃಷಿ ಅಧಿಕಾರಿ ಎಂದು ಪ್ರಾಂಶುಪಲರ ಬಳಿ ಹೇಳಿದ್ದನಂತೆ. ಸಧ್ಯ ತಾನು ‘ರಾ’ ಫೀಲ್ಡ್ ಏಜೆಂಟ್ ಆಗಿರುವುದಾಗಿ ಹೇಳುತ್ತಿದ್ದ ಎನ್ನಲಾಗಿದೆ.
ಕಾಲೇಜಿನಲ್ಲಿ ಡ್ರಗ್ಸ್ ಅವೇರ್ ನೆಸ್ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯ ಕಳ್ಳಾಟ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.