ತುಮಕೂರು: ಶೀಘ್ರದಲ್ಲಿ ಒಂದು ಸಾವಿರ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು’ ಎಂದು ಗೃಹಸಚಿವ ಡಾ. ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿ, ಎಲ್ಲವೂ ಸರಿಯಾಗಿದ್ದರೆ 545 ಪಿಎಸ್ಐ ನೇಮಕಾತಿ ಪ್ರಕ್ರಿಯೆ ಮುಗಿಯುತ್ತಿತ್ತು.
ಇದೀಗ ಈ ನೇಮಕಾತಿ ಹಗರಣ ನ್ಯಾಯಾಲಯದಲ್ಲಿದೆ. ಹಾಗಾಗಿ ಸ್ಥಗಿತವಾಗಿದೆ. ಮತ್ತಷ್ಟು ಪಿಎಸ್ಐ ನೇಮಕಾತಿಗಳ ಬಗ್ಗೆ ಇಲಾಖೆ ಪ್ರಸ್ತಾವ ಇಟ್ಟಿದೆ. ಒಟ್ಟಾರೆಯಾಗಿ ಒಂದು ಸಾವಿರ ಪಿಎಸ್ಐ ನೇಮಕ ಮಾಡಿಕೊಳ್ಳಲಿದ್ದೇವೆ ಎಂದಿದ್ದಾರೆ.