ಚಿತ್ರದುರ್ಗ: ರಾಜಕೀಯ ನಿವೃತ್ತಿ ಇಲ್ಲ, ಪಕ್ಷದ ಅದೇಶದಂತೆ ಮುಂದಿನ ಕೆಲಸವನ್ನು ಮಾಡಲಾಗುವುದು ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯ ತಯಾರಿಯನ್ನು ಈಗಿನಿಂದಲೇ ಮಾಡಲಾಗುವುದು ಎಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ನಗರದ ರೆಡ್ಡಿ ಬಿಲ್ಡಿಂಗ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ೩೫೦೦ ಸಾವಿರ ಜನಸಂಖ್ಯೆ ಇದ್ದರೂ ಕೂಡ ಕಳೆದ ೫೪ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಎರಡು ಭಾರೀ ಪಕ್ಷೇತರ ಶಾಸಕನಾಗಿ ಗೆದ್ದು, ನಂತರ ಎಂಎಲ್ ಸಿ ಆಗಿ ಸೇವೆ ಮಾಡಿ ನಂತರ ಶಾಸಕನಾಗಿ ಸೇವೆ ಮಾಡಲು ಚಿತ್ರದುರ್ಗ ಕ್ಷೇತ್ರದ ಜನತೆ ಅವಕಾಶ ಮಾಡಿಕೊಟ್ಟಿದ್ದಾರೆ. ಕೇವಲ ಜಾತಿಯನ್ನು ಹೊಂದಿದ್ದರೆ ಮಾತ್ರ ರಾಜಕೀಯ ಮಾಡಲು ಸಾಧ್ಯ ಎಂದು ಹೇಳವವರಿಗೆ ಕ್ಷೇತ್ರದ ಜನರು ನನ್ನ ಗೆಲ್ಲಿಸುವ ಮೂಲಕ ಉತ್ತರಿಸಿದ್ದಾರೆ. ಅದೇ ರೀತಿ ನಾನೂ ಕೂಡ ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ. ಬಡವರ, ನಿರ್ಗತಿಕರ ಹಾಗೂ ಶೋಷಿತರ ಪರವಾಗಿ ನಾನು ಕೆಲಸ ಮಾಡಿದ್ದೆನೆ. ಆದರೆ ಈ ಭಾರಿ ಚುನಾವಣೆಯಲ್ಲಿ ನನ್ನ ಜನರು ಸೋಲಿಸಿದ್ದಾರೆ. ಇದಕ್ಕೆ ನಾನು ತಲೆ ಬಾಗುತ್ತೇನೆ. ಸದಾ ಜನಸೇವೆಯಲ್ಲಿರುವ ನಾನು ಜನರ ತೀರ್ಪನ್ನು ಮನಸಾರೆ ಒಪ್ಪುತ್ತೇನೆ ಮತ್ತು ಅಧಿಕಾರ ಇಲ್ಲದಿದ್ದರೂ ಕೂಡ ಎಂದಿನAತೆ ನಾನು ಜನಸೇವೆ ಮಾಡುತ್ತೇನೆ. ಶಿಸ್ತಿನ ಪಕ್ಷ ಎಂದು ಕರೆಯಲ್ಪಡುವ ಬಿಜೆಪಿಯಲ್ಲಿ ನನಗೆ ವಹಿಸುವ ಜವಬ್ದಾರಿಯನ್ನು ಅರಿತು ಕೆಲಸ ಮಾಡುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಲ ಪಡಿಸುವ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ರಾಜ್ಯದಲ್ಲಿ ಗೆಲ್ಲಬೇಕು ಎಂಬುದು ನಮ್ಮ ಇಚ್ಚೆ. ಮೋದಿ ಕಾಲದಲ್ಲಿ ಭಾರತ ದೇಶ ವೇಗವಾಗಿ ಬೆಳೆಯುತ್ತಿದೆ. ೨೦೧೩ ರಲ್ಲಿ ಮೋದಿ ಗೆದ್ದಾಗ ರಾಜ್ಯದಲ್ಲಿ ಪೂರ್ಣ ಕಾಂಗ್ರೇಸ್ ಸರ್ಕಾರ ಇತ್ತು. ನಂತರ ಮೋದಿ ಅವರು ಗೆದ್ದಾಗಲೂ ಕಾಂಗ್ರೇಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು ಆದರೂ ನಾವು ಗೆದ್ದಿದ್ದೆವು. ಅದೇ ರೀತಿ ಈ ಭಾರೀಯೂ ನಾವು ಗೆಲ್ಲುತ್ತೆವೆ ಇದಕ್ಕಾಗಿ ಪೂರ್ಣ ತಯಾರಿ ನಡೆಸುತ್ತೆವೆ ಎಂದು ತಿಳಿಸಿದರು.
ವಿಧಾನಸಭಾ ಕ್ಷೇತ್ರದ ಜನತೆಗೆ ಹಾಗೂ ತನ್ನ ವಿರುದ್ದ ಜಯಗಳಿಸಿದ ಕಾಂಗ್ರೇಸ್ ಅಭ್ಯರ್ಥಿ ಕೆ.ಸಿ.ವಿರೇಂದ್ರಪಪ್ಪಿ ಅವರಿಗೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಜಲ್ಲಾಧ್ಯಕ್ಷ ಎ.ಮುರಳಿಧರ, ನ್ಯಾಯಾವಾದಿ ವಿಶ್ವನಾಥಯ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಸುರೇಶ್, ಸದಸ್ಯ ಹರೀಶ್, ಡಾ.ಸಿದ್ಧಾರ್ಥ, ಪಟೇಲ್ ಶಿವಕುಮಾರ್, ಮಲ್ಲಿಕಾರ್ಜನ್, ಸಿದ್ದಾಪುರದ ನಾಗಣ್ಣ, ಪ್ರಶಾಂತ್ ಸೇರಿದಂತೆ ಇತರರು ಭಾಗವಹಿಸಿದ್ದರು.