ದೆಹಲಿ: RBI ನೂತನ ಮಾರ್ಗಸೂಚಿ ಹೊರಡಿಸಿದ್ದು, ಸಾಲಗಾರರಿಗೆ ಬಿಗ್ ರಿಲೀಫ್ ದೊರೆತಿದೆ. ನಿಗದಿತ ಸಮಯಕ್ಕೆ EMI ಪಾವತಿಸಲು ಸಾಧ್ಯವಾಗದಿದ್ದರೆ ಹಣಕಾಸು ಸಂಸ್ಥೆಗಳು ತಮ್ಮ ಇಚ್ಛೆಗೆ ಬಂದಂತೆ ದಂಡ ಹಾಗೂ ವಿಳಂಬ ಪಾವತಿ ಶುಲ್ಕ ವಿಧಿಸುತ್ತಿದ್ದವು.
ಇದಕ್ಕೆ RBI ಬ್ರೇಕ್ ಹಾಕಿದೆ. ಹಣಕಾಸು ಸಂಸ್ಥೆಗಳು ವಿಧಿಸುವ ದಂಡ, ವಿಳಂಬ ಪಾವತಿ ಶುಲ್ಕ, ಬಡ್ಡಿ & ದಂಡದ ಬಡ್ಡಿ ಶುಲ್ಕಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳ ಕರಡು ಪತ್ರವನ್ನ RBI ಬಿಡುಗಡೆ ಮಾಡಿದೆ. ಅಲ್ಲದೆ, ದಂಡದ ಸಂಯೋಜನೆಯನ್ನು ಅದು ವಿರೋಧಿಸಿದೆ.