ಚಿತ್ರದುರ್ಗ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಪ್ರತಾಪ್‌ಜೋಗಿ.ಓ ರವರನ್ನು ಆಯ್ಕೆ ಮಾಡಲು ವಿಧಾನ ಪರಿಷತ್ ಸದಸ್ಯರಾದ ಶರವರಣ ರವರ ಮುಖಾಂತರ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಲಾಯಿತು.
2008 ರಿಂದ ಜೆಡಿಎಸ್ ಪಕ್ಷದ ವಿದ್ಯಾರ್ಥಿ ಘಟಕ, ಯುವ ಘಟಕ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡುವುದರ ಜೊತೆಗೆ ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತೇನೆ. ಅಲೆಮಾರಿ / ಅರೆಅಲೆಮಾರಿ ಸಮುದಾಯದ ಮತ್ತು ಹಿಂದುಳಿದ ವರ್ಗಗಳ ೯೭ ಜಾತಿಯ ಪರವಾಗಿ ಜೆಡಿಎಸ್ ಪಕ್ಷದಿಂದ ಟಿಕೇಟ್‌ನ್ನು ನೀಡಬೇಕಾಗಿ ಮನವಿ ಮಾಡಿಕೊಂಡರು.
ಬೆಳಿಗ್ಗೆ ೧೦.೩೦ಕ್ಕೆ ಶ್ರೀ ಮುರುಘಾಮಠದ ಗದ್ದಿಗೆಗೆ ನಮಸ್ಕರಿಸಿ ಪರಮ ಪೂಜ್ಯರಾದ ಶ್ರೀ ಶ್ರೀ ಶ್ರೀ ಬಸವಪ್ರಭು ಸ್ವಾಮೀಜಿಯವರ ಆರ್ಶೀವಾದವನ್ನು ಪಡೆದು, ಮುಖ್ಯವಾಹಿನಿಗೆ ಬಾರದ ಸಮುದಾಯಗಳಿಗೆ ನಮ್ಮ ಬೆಂಬಲವಿರುತ್ತದೆ ಎಂದು ಆರ್ಶೀವಾದಿಸಿದರು.
ಜಿಲ್ಲಾಧ್ಯಕ್ಷರಾದ ಡಿ.ಯಶೋಧರ ಮತ್ತು ರಾಜ್ಯ ಉಪಾಧ್ಯಕ್ಷರಾದ ಕಾಂತರಾಜ್, ತಾಲ್ಲೂಕು ಅಧ್ಯಕ್ಷರಾದ ತಿಮ್ಮಣ್ಣ ಗೋಪಾಲಸ್ವಾಮಿ ನಾಯಕ ರವರ ಸಮ್ಮುಖದಲ್ಲಿ ಪಕ್ಷ ಅವಕಾಶ ನೀಡಿದರೆ. ಪ್ರಮಾಣೀಕವಾಗಿ ಮತ್ತು ಸಮರ್ಥವಾಗಿ ಚುನಾವಣೆಯನ್ನು ಹೆದರಿಸುತ್ತೇನೆ. ವರಿಷ್ಠರ ಮಾರ್ಗದರ್ಶನದ ಮೇರೆಗೆ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧನಾಗಿರುತ್ತೇನೆ ಎಂದರು.