ಸುಳ್ಯ: ಹೌದು ಚಿಕನ್ ಸಾಂಬಾರ್‌ಗಾಗಿ ತಂದೆಯೇ ಮಗನನ್ನು ಕೊಲೆ ಮಾಡಿರುವ ವಿಚಿತ್ರ ಘಟನೆ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಮೊಗ್ರದಲ್ಲಿ ನಡೆದಿದೆ.
ಇಲ್ಲಿನ ಗುತ್ತಿಗಾರಿನ ಮೊಗ್ರದ ಶಿವರಾಮ್(33) ಕೊಲೆಯಾದ ವ್ಯಕ್ತಿ. ಶಿವರಾಮ ಮನೆಯಲ್ಲಿ ಕೋಳಿ ಪದಾರ್ಥ ಮಾಡಿದ್ದು, ಕೆಲಸ ಮುಗಿಸಿ ತಂದೆ ಶೀನ ಮನೆಗೆ ಬಂದಾಗ ಅದು ಖಾಲಿಯಾಗಿತ್ತು.
ಇದು ಇಬ್ಬರ ನಡುವೆ ತೀವ್ರ ಜಗಳಕ್ಕೆ ಕಾರಣವಾಗಿ ಶೀನ ಶಿವರಾಂನ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ. ಅವರು ಅಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟಿರುವುದಾಗಿ ವರದಿಯಾಗಿದೆ.