ಹೊಳಲ್ಕೆರೆ: ಕಾಂಗ್ರೆಸ್‌ನಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ ಎಂಬ ಅರಿವು ಮತದಾರರಿಗೆ ಬಂದಿದ್ದು, ಪಕ್ಷದ ಗೆಲುವಿಗೆ ಇದು ಪೂರಕವಾಗಿದೆ ಎಂದು ಮಾಜಿ ಸಚಿವ ಕಾಂಗ್ರೆಸ್‌ಅಭ್ಯರ್ಥಿಎಚ್.ಆಂಜನೇಯ ಹೇಳಿದರು.
ತಾಲೂಕಿನ ಹೆಚ್.ಡಿ.ಪುರಜಿಪಂಯತೇಕಲವಟ್ಟಿ, ಉಪ್ಪರಿಗೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಮತಪ್ರಚಾರದಲ್ಲಿ ಮಾತನಾಡಿದಅವರು, ರಾಜ್ಯ ಬಿಜೆಪಿ ಸರ್ಕಾರ ಮಿತಿಮೀರಿದ ಭ್ರಷ್ಟಾಚಾರದಿಂದಾಗಿಅಭ್ಯರ್ಥಿಪರ ಮತ ಕೇಳುವ ಅರ್ಹತೆಇಲ್ಲದೇ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಬಿಜೆಪಿಗರಿಗೆ ಮತ ಕೇಳಲು ಬೇರೆಯಾವುದೇ ವಿಚಾರಗಳು ಇಲ್ಲ. ಕಾಂಗ್ರೆಸ್ ಪಕ್ಷ ಮಾತ್ರ ಮತ ಕೇಳುವ ಅರ್ಹತೆ ಹೊಂದಿದೆ.ನಾನು ಸಚಿವನಾಗಿ ಮಾಡಿದ ಕಾರ್ಯಗಳೆ ಈ ಬಾರಿಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆಎಂದು ಹೇಳಿದರು.
ದೇಶದರಾಜಕೀಯಇತಿಹಾಸದುದ್ದಕ್ಕೂಕಾಂಗ್ರೆಸ್ ಪಕ್ಷ ಮತ್ತುಅದರ ನೇತಾರರಿಗೆ ಮಾತ್ರ ಈ ದೇಶದಜನರ ಬವಣೆ,ನಿರುದ್ಯೋಗ,ಬಡತನ ನಿವಾರಣೆ ಮಾಡುವುದು ಹಾಗೂ ಸಾಮಾಜಿಕ ಸಾಮರಸ್ಯಕಾಪಾಡುವುದು, ಸಾಮಾಜಿಕ ಮತ್ತುಆರ್ಥಿಕ ಭಧ್ರತೆಗಳನ್ನು ಜನರಿಗೆಕೊಡಮಾಡುವುದು ಸಾಧ್ಯವಾಗಿದೆ. ಹಾಲಿ ಕೇಂದ್ರದಲ್ಲಿರುವ ಮೋದಿ ಸರ್ಕಾರ ಸುಳ್ಳಿನ ಸರಮಾಲೆಯನ್ನೇಧರಿಸಿಕೊಂಡು ಜನರನ್ನು ಸತತ 9 ವರ್ಷಗಳಿಂದಲೂ ವಂಚಿಸುತ್ತಾದೇಶವನ್ನು ದಿವಾಳಿ ಅಂಚಿಗೆತAದು ನಿಲ್ಲಿಸಿದೆ ಎಂದುಕಿಡಿಕಾರಿದರು.
ಬಿಜೆಪಿ ಸರ್ಕಾರವುಕೇಂದ್ರ ಮತ್ತುರಾಜ್ಯದಅಧಿಕಾರ ವಹಿಸಿಕೊಂಡ ನಂತರಯಾವುದೇಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಬಡವರಿಗೆ ವಸತಿ ಕಲ್ಪಿಸಿಲ್ಲ. ವೃದ್ಧರಿಗೆ ಮಾಸಾಶನ ನೀಡುವುದು ಸೇರಿದಂತೆ ಅನೇಕ ಯೋಜನೆಗಳಿಗೆ ಹಣ ನೀಡದೇದಿವಾಳಿಯಾಗಿದೆಎಂದರು.
ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಕಾಂಗ್ರೆಸ್ ಪಕ್ಷವುಅಭಿವೃದ್ಧಿ ಕೆಲಸಗಳನ್ನು ಮಾಡಿ ಮತಕೇಳುತ್ತಿದೆ. ಬಿಜೆಪಿ ಜನರ ಭಾವನೆಗಳನ್ನು ಕೆರಳಿಸಿ ಮತ ಕೇಳುತ್ತಿದೆ.ಕಾಂಗ್ರೆಸ್ ಪಕ್ಷದಅವಧಿಯಲ್ಲಿಜಾರಿಯಾದ ನೂರಾರುಅಭಿವೃದ್ಧಿ ಕೆಲಸಗಳು ಇಂದಿಗೂ ಕಣ್ಮುಂದೆ ಇವೆ.ಶಾಸಕ ಎಂ.ಚAದ್ರಪ್ಪನದುರ್ವತನೆಗೆ ಬೇಸತ್ತಿದ್ದು ಮತದಾರರೆಲ್ಲರೂಅವರನ್ನು ಸೋಲಿಸಿ ಎಚ್.ಆಂಜನೇಯಅವರನ್ನುಗೆಲ್ಲಿಸಲುಸರ್ವ ಸನ್ನದ್ದಧರಾಗಬೇಕಿದೆಎಂದರು.
ಸಿದ್ಧರಾಮಯ್ಯನವರ ಅಧಿಕಾರದಅವಧಿಯಲ್ಲಿಜಿಲ್ಲೆಯಯಾವುದೇ ಭಾಗದಲ್ಲಿ ನೋಡಿದರೂಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದವು.ಆದರೀಗಡಬಲ್ ಇಂಜಿನ್ ಸರ್ಕಾರವಿದ್ದರೂಅಭಿವೃದ್ಧಿ ಕೆಲಸಗಳು ಎಲ್ಲೂಕಾಣುತ್ತಿಲ್ಲ. ಹೀಗಾಗಿ ಮತದಾರರುಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಅರಿತು ಮತ ನೀಡಬೇಕು ಮನವಿ ಮಾಡಿದರು.
ಕೆಪಿಸಿಸಿ ಅಸಂಘಟಿತ ಕಾರ್ಮಿಕರ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ,ಈಗಿನ ಡಬಲ್ ಇಂಜಿನ ಸರ್ಕಾರಕಾಂಗ್ರೆಸ್ ಪಕ್ಷ ಮಾಡಿದ ಸಾಧನೆಗಳನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ.ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಆಡಳಿತದ ಅವಧಿಯಲ್ಲಿ ಹಿಂದುಳಿದ ವರ್ಗ, ದಲಿತರು ಹಾಗೂ ಎಲ್ಲ ವರ್ಗದಜನರ ಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ.ಅವರ ಸರ್ಕಾರದಲ್ಲಿ ಸಮಾಜಕಲ್ಯಾಣ ಇಲಾಖೆ ಸಚಿವರಾಗಿದ್ದಎಚ್.ಆಂಜನೇಯರವರು ಸಾವಿರಾರುಕೋಟಿಅನುದಾನತಂದು ಹೊಳಲ್ಕೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಕ್ಷೇತ್ರವನ್ನುಅಭಿವೃದ್ಧಿ ಪಥದತ್ತಕೊಂಡೊಯ್ಯಲು ಎಚ್.ಆಂಜನೇಯ ಅವರನ್ನುಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿನಿವೃತ್ತಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಸದಸ್ಯರಾದಡಿ.ಕೆ.ಶಿವಮೂರ್ತಿ,ಇಂದಿರಾಕಿರಣ್, ಕಾಂಗ್ರೆಸ್ ಓಬಿಸಿ ರಾಜ್ಯಉಪಾಧ್ಯಕ್ಷಕಿರಣ್‌ಕುಮಾರ್‌ಯಾದವ್, ಹೊಳಲ್ಕೆರೆ ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ಬ್ಲಾಕ್‌ಕಾಂಗ್ರೆಸ್ ಮಾಜಿಅಧ್ಯಕ್ಷಎಚ್.ಡಿ.ರಂಗಯ್ಯ, ಮುಖಂಡರಾದ ವೈಶಾಖ್‌ಯಾದವ್, ಮೂರ್ತಪ್ಪ, ದ್ಯಾಮಣ್ಣ, ಮಹಾಲಿಂಗಪ್ಪ, ಏಕಾಂತಪ್ಪ, ಮೂಡಲಗಿರಿಯಪ್ಪ, ರಾಜಣ್ಣ, ತಿಪ್ಪೇಸ್ವಾಮಿಉಪಸ್ಥಿತರಿದ್ದರು.