ಬೆಂಗಳೂರು : ಮೇ 10 ರೊಳಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮೇ. ಮೊದಲ ವಾರ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ವಿದ್ಯಾರ್ಥಿಗಳು karresults.nic.in ಮತ್ತು kseab.karnataka.gov.in. ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ.ಅಧಿಕೃತ ವೆಬ್ಸೈಟ್-karresults.nic.in ಗೆ ಹೋಗಿ, ಮುಖಪುಟದಲ್ಲಿ, ಕರ್ನಾಟಕ SSLC 2023 ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಹೊಸ ಲಾಗಿನ್ ಪುಟ ತೆರೆಯುತ್ತದೆ, ನಂತರ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ವಿವರಗಳನ್ನು ಸಲ್ಲಿಸಿದರೆ ಫಲಿತಾಂಶ ವೀಕ್ಷಿಸಬಹುದು.