Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಚಿತ್ರದುರ್ಗ

0

 

ಚಿತ್ರದುರ್ಗ: ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಚಿತ್ರದುರ್ಗ ಜಿಲ್ಲೆ ಶೇ.96.8ರಷ್ಟು ದಾಖಲೆಯ ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.

ಜಿಲ್ಲೆಯಲ್ಲಿ ಈ ಬಾರಿ ಪರೀಕ್ಷೆ ಬರೆದ 21995 ವಿದ್ಯಾರ್ಥಿಗಳು ಪೈಕಿ 21300 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.96.8 ಫಲಿತಾಂಶ ಲಭಿಸಿದೆ. 2021-22ನೇ ಸಾಲಿನಲ್ಲಿ ಶೇ.94.3 ದಾಖಲಿಸಿತ್ತು. ಪ್ರಸ್ತುತ ವರ್ಷದ ಫಲಿತಾಂಶವು ಕಳೆದ ವರ್ಷಕ್ಕಿಂತ ಶೇ.2.49ರಷ್ಟು ಹೆಚ್ಚಳವಾಗಿರುತ್ತದೆ.

20978 ವಿದ್ಯಾರ್ಥಿಗಳು ಉತ್ತೀರ್ಣ: ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 21898 ವಿದ್ಯಾರ್ಥಿಗಳ ಪೈಕಿ 10458 ಬಾಲಕರು ಹಾಗೂ 10520 ಬಾಲಕಿಯರು ಸೇರಿ ಒಟ್ಟು 20978 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ 2275 ಬಾಲಕರು ಹಾಗೂ 2164 ಬಾಲಕಿಯರು ಸೇರಿ ಒಟ್ಟು 4439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 2861 ಬಾಲಕರು ಹಾಗೂ 2891 ಬಾಲಕಿಯರು ಸೇರಿ ಒಟ್ಟು 5752 ವಿದ್ಯಾರ್ಥಿಗಳು ಉತ್ತೀರ್ಣರಾಗಿದಾರೆ. ಹಿರಿಯೂರು ತಾಲ್ಲೂಕಿನಲ್ಲಿ 1677 ಬಾಲಕರು ಹಾಗೂ 1681 ಬಾಲಕಿಯರು ಸೇರಿ ಒಟ್ಟು 3358 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 1168 ಬಾಲಕರು ಹಾಗೂ 1343 ಬಾಲಕರು ಸೇರಿ ಒಟ್ಟು  2511 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೊಸದುರ್ಗ ತಾಲ್ಲೂಕಿನಲ್ಲಿ 1478 ಬಾಲಕರು ಹಾಗೂ 1455 ಬಾಲಕಿಯರು ಸೇರಿ ಒಟ್ಟು 2933 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 999 ಬಾಲಕರು ಹಾಗೂ 986 ಬಾಲಕಿಯರು ಸೇರಿ ಒಟ್ಟು 1985 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಚಳ್ಳಕೆರೆ ತಾಲ್ಲೂಕು ಫಸ್ಟ್: ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ ಚಳ್ಳಕೆರೆ ತಾಲ್ಲೂಕು ಶೇ.98.2 ರಷ್ಟು ಫಲಿತಾಂಶ ಪಡೆಯುವ ಮೂಲಕ ಮೊದಲ ಸ್ಥಾನಗಳಿಸಿದೆ. ಉಳಿದಂತೆ ಮೊಳಕಾಲ್ಮುರು ಶೇ.97.8, ಹಿರಿಯೂರು ಶೇ.95.6, ಹೊಸದುರ್ಗ ಶೇ.94.9, ಚಿತ್ರದುರ್ಗ ಶೇ.94.6 ಹಾಗೂ ಹೊಳಲ್ಕೆರೆ ತಾಲ್ಲೂಕು ಶೇ.94.3 ಫಲಿತಾಂಶ ಪಡೆದಿದೆ.

ದಯಾನಿಧಿ ಎಸ್.ಪಿ ಜಿಲ್ಲಾ ಟಾಪರ್: ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ  ಹಿರಿಯೂರಿನ ರಾಷ್ಟ್ರೀಯ ಅಕಾಡಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ದಯಾನಿಧಿ.ಎಸ್.ಪಿ ಅವರು 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದುಕೊಂಡರೆ, ಹಿರಿಯೂರು ರಾಷ್ಟ್ರೀಯ ಅಕಾಡೆಮಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸೃಜನ ಎಸ್ ಗೌಡ, ಚಳ್ಳಕೆರೆ ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಸಾಯಿಕೀರ್ತನಾ ಎಸ್ ಹಾಗೂ ಚಿತ್ರದುರ್ಗ ತಾಲ್ಲೂಕು ಭರಮಸಾಗರ ಡಿ.ವಿ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ನಿತಿನ್ ಹೆಚ್.ಎಸ್. ಅವರು 625ಕ್ಕೆ 622 ಅಂಕ ಪಡೆದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಉಳಿದಂತೆ ಚಿತ್ರದುರ್ಗ ತಾಲ್ಲೂಕು ಹಳವುದರ ಜ್ಞಾನಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿ ಸಹನ ಜೆ ಹಾಗೂ ಹೊಳಲ್ಕೆರೆ ಎಂ.ಎಂ.ಪ್ರೌಢಶಾಲೆ ವಿದ್ಯಾರ್ಥಿ ರಕ್ಷಾ ಟಿ 625ಕ್ಕೆ 620 ಅಂಕ ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ.

282 ಶಾಲೆಗಳಲ್ಲಿ ಶೇ.100 ಫಲಿತಾಂಶ: ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಜಿಲ್ಲೆಯ 282 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಈ ಪೈಕಿ 131 ಸರ್ಕಾರಿ ಶಾಲೆಗಳಾದರೆ, 53 ಅನುದಾನಿತ ಶಾಲೆಗಳು ಹಾಗೂ ಅನುದಾನರಹಿತ 98 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ತಿಳಿಸಿದ್ದಾರೆ.

Leave A Reply

Your email address will not be published.