ದೆಹಲಿ: ಸ್ಟೆನೋಗ್ರಾಫರ್ ಗ್ರೇಡ್-ಸಿ, ಡಿ-2022 ಹುದ್ದೆಗಳ ನೇಮಕಾತಿಗಾಗಿ ಫೆಬ್ರವರಿ 15, 16 ಮತ್ತು ಮಾರ್ಚ್ 10 ರಂದು ನಡೆಸಲಾದ ಕೌಶಲ್ಯ ಪರೀಕ್ಷೆಗಳನ್ನು ಮತ್ತೊಮ್ಮೆ ನಡೆಸಲು ಸಿಬ್ಬಂದಿ ಆಯ್ಕೆ ಆಯೋಗವು ನಿರ್ಧರಿಸಿದೆ.
ದೇಶಾದ್ಯಂತ ಈ ಪರೀಕ್ಷೆಗಳ ನಿರ್ವಹಣೆಗೆ ಅಭ್ಯರ್ಥಿಗಳಿಂದ ಭಾರೀ ಆಕ್ಷೇಪಣೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಹೊಸ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಲಾಗಿದೆ.
ಏಪ್ರಿಲ್ 25 ರಂದು ಹಿಂದಿ ಮತ್ತು 26 ರಂದು ಇಂಗ್ಲಿಷ್‌ನಲ್ಲಿ ಸ್ಟೆನೋಗ್ರಾಫರ್ ಹುದ್ದೆಗೆ ಪರೀಕ್ಷೆ ನಡೆಯಲಿದೆ.