ಇಂಡೋನೇಷ್ಯಾ: ಇಂಡೋನೇಷ್ಯಾ ದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಜಾವಾ ದ್ವೀಪದ ತುಬಾನ್ ಎಂಬಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ.
ಸ್ಥಳೀಯ ಕಾಲಮಾನ ಸಂಜೆ 4:55ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಕೇಂದ್ರ ಬಿಂದು 594 ಕಿಮೀ ಆಳದಲ್ಲಿತ್ತು ಎಂದು ಇಂಡೋನೇಷ್ಯಾದ ಭೂಗರ್ಭ ಶಾಸ್ತ್ರ ಇಲಾಖೆ ಮಾಹಿತಿ ನೀಡಿದ್ದು, ಸುನಾಮಿ ಭೀತಿಯಿಲ್ಲ ಎಂದು ಹೇಳಿದೆ.