ಬೆಳಗಾವಿ: ಈ ಬಾರಿ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸುತ್ತೇನೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿ, ಯಮಕನಮರಡಿಯ ಪ್ರತೀ ಗ್ರಾಮಕ್ಕೆ ತೆರಳಿ ಪ್ರಚಾರ ಮಾಡುತ್ತೇನೆ. ಇಲ್ಲವಾದರೆ ವಿರೋಧಿಗಳು ಅಪಪ್ರಚಾರ ಮಾಡುತ್ತಾರೆ.
ಪ್ರಚಾರಕ್ಕೆಂದು ಹೊಸ ವಾಹನ ತಂದಿದ್ದು, ಇನ್ನೆರಡು ದಿನಗಳಲ್ಲಿ ಸ್ಮಶಾನದಲ್ಲಿ ಪೂಜೆ ಮಾಡುತ್ತೇವೆ. ಇದು ಆಚಾರಕ್ಕೆ ವಿರುದ್ಧವಾದುದಲ್ಲ, ಕಳೆದ 30 ವರ್ಷದಿಂದಲೂ ಹೀಗೆಯೇ ಮಾಡಿಕೊಂಡು ಬಂದಿದ್ದೇನೆ ಎಂದಿದ್ದಾರೆ.