ಬೆಂಗಳೂರು: ಬನ್ನೇರುಘಟ್ಟದ ಮಹಾತಾಯಿ ಹಿರಿಯಾನೆ ಸುವರ್ಣ(47) ಇಹಲೋಕ ತ್ಯಜಿಸಿದೆ. ಬರೋಬ್ಬರಿ 9 ಮರಿಗಳಿಗೆ ಜನ್ಮ ನೀಡಿದ್ದ ಸುವರ್ಣ 10ನೇ ಹೆರಿಗೆ ನೋವಿನಲ್ಲೇ ಕೊನೆಯುಸಿರೆಳೆದಿದೆ.
ಹೆರಿಗೆಗೂ ಮುನ್ನವೇ ಹೊಟ್ಟೆಯಲ್ಲಿದ್ದ ಮರಿಯಾನೆ ಸಾವನ್ನಪ್ಪಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆ ಮೊರೆ ಹೋಗಿದ್ದಾರೆ.
ಬಳಿಕ ತಾಯಿ ಆನೆಗೆ ತೀವ್ರ ಸಮಸ್ಯೆ ಉಂಟಾಗಿದ್ದು, ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದಿದೆ. ಮಹಾತಾಯಿ ‘ಸುವರ್ಣ’ ಕಳೆದುಕೊಂಡ ಜೈವಿಕ ಉದ್ಯಾನದ ಸಿಬ್ಬಂದಿ ಮುಖದಲ್ಲಿ ಮೌನ ಮಡುಗಟ್ಟಿದೆ