Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಮಾವಿನ ತೋಟದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಸಿಡಿಲು ಬಡಿದು ಸಾವು.!

0

ಜಾರ್ಖಂಡ್: ಮಾವಿನ ತೋಟದಲ್ಲಿ ಆಟವಾಡುತ್ತಿದ್ದಾಗ ಸಿಡಿಲು ಬಡಿದು ನಾಲ್ಕು ಮಕ್ಕಳು ದಾರುಣವಾಗಿ ಮೃತರಾಗಿರುವ ಘಟನೆ ಸಾಹೀಬ್ಗಂಜ್ ಜಿಲ್ಲೆಯ ರಾಧಾನಗರ್ ಬಾಬುಟೊಲಾ ಎಂಬಲ್ಲಿ ಘಟನೆ ನಡೆದಿದೆ.

ಮೃತ ಮಕ್ಕಳೆಲ್ಲ 9ರಿಂದ 12ರ ವಯೋಮಾನದವರಾಗಿದ್ದಾರೆ. ಮೃತರಲ್ಲಿ ಹುಮಾಯೂನ್ ಶೇಕ್ ಎನ್ನುವರ 12 ವರ್ಷದ ಮಗಳು, 9 ವರ್ಷದ ಮಗ ಹಾಗೂ ಮೆಹಬೂಬ್ ಶೇಕ್ ಎನ್ನುವರ 10 ವರ್ಷದ ಮಗ ಮತ್ತು ಅಶ್ರಫುಲ್ ಶೇಕ್ ಎನ್ನುವರ 9 ವರ್ಷದ ಮಗ ಸೇರಿದ್ದಾರೆ.

ಘಟನೆಯಲ್ಲಿ ಇನ್ನೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಸನಿಹದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾಹೀಬಗಂಜ್ ಜಿಲ್ಲೆಯ ಎಸ್ಪಿ ಅನುರಂಜನ್ ಕಿಸಪೊಟ್ಟಾ ತಿಳಿಸಿದ್ದಾರೆ.

Leave A Reply

Your email address will not be published.