ಒಡಿಶಾ: ಹೌದು ಕಟಕ್‌ನಲ್ಲಿ ಕ್ರಿಕೆಟ್ ಪಂದ್ಯದ ವೇಳೆ ದುರಂತ ನಡೆದಿದೆ. ಭಾನುವಾರ ಬ್ರಹ್ಮಪುರ ಮತ್ತು ಶಂಕರಪುರ ತಂಡಗಳ ನಡುವೆ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು.
ಈ ಪಂದ್ಯಕ್ಕೆ 22 ವರ್ಷದ ಲಕ್ಕಿ ರಾವುತ್ ಎಂಬಾತ ಅಂಪೈರ್ ಆಗಿದ್ದು, ಎಸೆತವೊಂದಕ್ಕೆ ನೋ ಬಾಲ್ ಎಂದು ತೀರ್ಪು ನೀಡಿದ್ದನು. ಈ ವೇಳೆ ಇದು ನೋ ಬಾಲ್ ಅಲ್ಲ ಎಂದು ಸ್ಮೃತಿರಂಜನ್ ರಾವುತ್ ಎಂಬಾತ ವಾಗ್ವಾದಕ್ಕಿಳಿದು, ಚೂರಿಯಿಂದ ಚುಚ್ಚಿದ್ದಾನೆ. ಕೂಡಲೇ ಲಕ್ಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.