ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ BJP ಜನರ ಜೇಬಿನಿಂದ ಕೊಳ್ಳೆ ಹೊಡೆದಿರುವ ಹಣವನ್ನು ವಾಪಾಸ್ ತಂದು ಕೊಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿ ‘BJP ಮಹಿಳೆಯರ ಹಣವನ್ನೇ ಹೆಚ್ಚು ಕದ್ದಿರೋದು. ಹೀಗಾಗಿ ಮೊದಲ ಹೆಜ್ಜೆಯಾಗಿ ಮಹಿಳೆಯರಿಗೆ 2000ರೂ. ನೀಡುತ್ತೇವೆ. BJPಯವರು ನಿಮ್ಮಿಂದ ಕದ್ದ ದುಡ್ಡಿನಿಂದಲೇ ಶಾಸಕರನ್ನು ಖರೀದಿ ಮಾಡುತ್ತಾರೆ. ಹಾಗಾಗಿ, ಕಾಂಗೆಸ್‌ಗೆ 140-150 ಸೀಟು ಗೆಲ್ಲಿಸಿ ಕೊಡಬೇಕೆಂದು’ ಅವರು ಮನವಿ ಮಾಡಿದ್ದಾರೆ.