ಮುಂಬೈ: ಬೆಳ್ಳಗಾಗಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿವುದಾಗಿ ಹರಿದಾಡುತ್ತಿರುವ ಸುದ್ದಿಗೆ ನಟಿ ಕಾಜೋಲ್ ಪ್ರತಿಕ್ರಿಯಿಸಿದ್ದಾರೆ.
ಸಂದರ್ಶನವೊಂದರಲ್ಲಿ, ‘ಇಂಡಸ್ಟ್ರಿಗೆ ಬಂದ ಆರಂಭದ ದಿನಗಳಲ್ಲಿ ಕಪ್ಪಗಿದ್ದೆ ಎಂದು ಟೀಕಿಸಿದ್ದರು. ನಾನು ಬೆಳ್ಳಗಾಗಲು ಯಾವುದೇ ಸರ್ಜರಿಗೆ ಒಳಗಾಗಿಲ್ಲ.
ಕಳೆದ 10 ವರ್ಷಗಳಲ್ಲಿ ಬಿಸಿಲಿನಲ್ಲಿ ಕೆಲಸ ಮಾಡಿದ್ದರಿಂದ ನನ್ನ ಚರ್ಮವು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿತು. ಆ ನಂತರ ಬಿಸಿಲಿನಿಂದ ದೂರವಿರುವುದರಿಂದ ಬೆಳ್ಳಗೆ ಕಾಣುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.