ದಾವಣಗೆರೆ; ಮೆಳ್ಳೇಕಟ್ಟೇ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮೇ 23 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
220ಕೆ.ವಿ ಎಸ್.ಆರ್.ಎಸ್. ಫೀಡರ್ ವ್ಯಾಪ್ತಿಯ ವಿದ್ಯಾ ನಗರ, ರಂಗನಾಥ ಬಡಾವಣೆ, ತರಳಬಾಳು ಬಡಾವಣೆ, ಸರಸ್ವತಿ ನಗರ, ಶಿವಕುಮಾರಸ್ವಾಮಿ ಬಡಾವಣೆ, ಚಿಕ್ಕಮ್ಮಣ್ಣಿ ದೇವರಾಜ್ ಅರಸ್ ಬಡಾವಣೆ, ಲೋಕಿಕೆರೆ ರಸ್ತೆ ಇಂಡಸ್ಟ್ರಿಯಲ್ ಏರಿಯಾ, ಎಸ್.ಎಸ್. ಹೈಟೆಕ್ ಆಸ್ಪತ್ರೆ, ರಾಮ ನಗರ, ವಿವೇಕಾನಂದ ಬಡಾವಣೆ, ಆಂಜನೇಯ ಬಡಾವಣೆ, ಶಾಮನೂರು, ಜೆ.ಹೆಚ್. ಪಟೇಲ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಗ್ರಾಮೀಣ ಬಾಗದ 6ನೇ ಮೈಲಿ, ತೋಳಹುಣಸೆ, ಬೆಳವನೂರು, ನಾಗನೂರು, ತುರ್ಚಗಟ್ಟ, ಯಲ್ಲಮ್ಮ ಮಿಲ್ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು
ಮೇಳ್ಳೆಕಟ್ಟೆ ಫೀಡರ್ ವ್ಯಾಪ್ತಿಯ ಆಲೂರು, ಬಿ.ಜಿ.ಹಳ್ಳಿ, ಸಿದ್ದನೂರು, ಮಲ್ಲಾಪುರ, ಗುಡಾಳು, ಅಣಜಿ, ಕಿತ್ತೂರು, ಕಂದನಕೋವಿ, ಮೆಳ್ಳೆಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.