ಬೆಂಗಳೂರು: ಮೋದಿ ಎತ್ತರಕ್ಕೆ ಬೆಳೆದ ನಾಯಕ, ಅವರು ಹೀಗೆ ಮಾತನಾಡುವುದು ಸರಿಯೇ? ಎಂದು ಹೆಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.
ಜೆಡಿಎಸ್, ಕಾಂಗ್ರೆಸ್‌ನ ಬಿ ಟೀಂ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಕಳೆದ ಬಾರಿ ರಾಹುಲ್ ಗಾಂಧಿ ಜೆಡಿಎಸ್, ಬಿಜೆಪಿಯ ಬಿ ಟೀಂ ಎಂದಿದ್ದರು.
ಈಗ ಮೋದಿ ಹೇಳಿದ್ದಾರೆ. ರಾಹುಲ್ ಯಂಗ್‌ಸ್ಟರ್, ಅವರು ಏನು ಬೇಕಾದರೂ ಮಾತನಾಡಲಿ. ಇನ್ನು, ಮೋದಿಯವರು ಹೇಳಿದ್ದನ್ನು ಅವರಿಗೇ ಬಿಡ್ತೀನಿ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.