ದೆಹಲಿ: ಡಿಕೆಶಿ ಅವರನ್ನು ಹೈಕಮಾಂಡ್ ಸಿಎಂ ಮಾಡಲ್ಲವೆಂದು ನಾನು ಹೇಳಿಯೇ ಇಲ್ಲವೆಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿ, ನಾನು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದೆ. ಆಗ ನಾನು ಹಾಗೂ ಡಿಕೆಶಿ ಸಿಎಂ ಆಗಬೇಕೆಂದು ಆಸೆ ಇಟ್ಟುಕೊಂಡಿದ್ದೇವೆ ಎಂದಿದ್ದೆ ಅಷ್ಟೇ. ಸಿಎಂ ಯಾರಾಗಬೇಕೆಂದು ಅಂತಿಮವಾಗಿ ನಿರ್ಧರಿಸುವವರು ಹೈಕಮಾಂಡ್ ಮತ್ತು ಶಾಸಕರು. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುವುದು ಖಚಿತ ಎಂದಿದ್ದಾರೆ.