ಬೆಂಗಳೂರು: ಮಾರ್ಚ್ 29 ರಂದು ಜಾರಿಯಾದ ಚುನಾವಣೆ ನೀತಿ ಸಂಹಿತೆ ಆರಂಭವಾದ ಬಳಿಕ ₹ 147.46 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಜೊತೆಗೆ ಸುಮಾರು ₹ 100 ಕೋಟಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಶಪಡಿಸಿಕೊಳ್ಳಲಾಗಿದ್ದು, ₹ 24.22 ಕೋಟಿ ಮೌಲ್ಯದಷ್ಟು ಮತದಾರರಿಗೆ ವಿತರಿಸಲು ಸೀರೆ, ಕುಕ್ಕರ್ ಹಾಗೂ ಇನ್ನಿತರ ವಸ್ತುಗಳನ್ನು ಜಪ್ತಿಮಾಡಲಾಗಿದೆಯಂತೆ.