ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಸಂಬಂಧ ಸರ್ಕಾರ ಹೊಸ ಮಾಹಿತಿ ನೀಡಿದೆ. ಇದೀಗ ಅರ್ಜಿ ಸಲ್ಲಿಸಲು ಮನೆಯ ಯಜಮಾನಿಯೇ ಹೋಗಬೇಕೆಂದಿಲ್ಲ. !
ಪತಿ ಅಥವಾ ಮಕ್ಕಳು ಸಹ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಆದರೆ ಹೋಗುವಾಗ ಯಜಮಾನಿ ಮಹಿಳೆಯ ಆಧಾರ್, ಇದಕ್ಕೆ ಲಿಂಕ್ ಆಗಿರುವ ಮೊಬೈಲ್, ಅವರ ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿಯನ್ನು ಮರೆಯದೇ ತೆಗೆದುಕೊಂಡು ಹೋಗಬೇಕು.