ಬೆಳಗಾವಿ: ಪಕ್ಷ ಬಿಟ್ಟಿರುವ ನನ್ನ ಬಗ್ಗೆ ಮಾತಾಡಲು ಮಾಜಿ CM ಯಡಿಯೂರಪ್ಪನವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಏಕೆಂದರೆ ಯಡಿಯೂರಪ್ಪ BJPಯಲ್ಲಿ ಸಿಎಂ, ವಿರೋಧ ಪಕ್ಷದ ನಾಯಕನಾಗಿದ್ದರೂ ಅವರು ಅಲ್ಲಿಂದ ಹೊರಬಂದು KJP ಪಕ್ಷ ಕಟ್ಟಿದ್ದರು. ಹೀಗಿರುವಾಗ ನಾನು ಕಾಂಗ್ರೆಸ್ ಸೇರಿರುವುದನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದರು.
ನನ್ನನ್ನು ಸೋಲಿಸುವುದು-ಗೆಲ್ಲಿಸುವುದು ಕ್ಷೇತ್ರದ ಮತದಾರರ ಕೈಯಲ್ಲಿದ್ದು ಅವರು ಕೈಬಿಡಲಾರರು ಎಂಬ ವಿಶ್ವಾಸವಿದೆ ಎಂದರು.