ಬೆಂಗಳೂರು: ಗ್ರಾಮೀಣ ಕೃಪಾಂಕದಡಿ ನೇಮಕಗೊಂಡಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದೆ.
ಗ್ರಾಮೀಣ ಕೃಪಾಂಕದಡಿ ನೇಮಕಾತಿ ಹೊಂದಿರುವ ಶಿಕ್ಷಕರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮ 247-ಎ ರನ್ವಯ ಅರ್ಹತಾದಾಯಕ ಸೇವೆ ಮಂಜೂರಿಗೆ ಅವಕಾಶವಿಲ್ಲ ಎಂದು ಇಲಾಖೆ ತಿಳಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು (ಪ್ರಾಥಮಿಕ ಶಿಕ್ಷಣ) ಸುತ್ತೋಲೆ ಹೊರಡಿಸಿದ್ದಾರೆ