ಆತ್ಮೀಯ ಓದುಗರೆ,
“ಬಿಸಿ ಸುದ್ದಿ” ಆನ್ ಲೈನ್ ಪತ್ರಿಕೆ ಪ್ರಾರಂಭವಾಗಿ ಇಂದಿಗೆ ಜೂನ್ 1 ಕ್ಕೆ 8 ವರ್ಷ ತುಂಬಿ 9 ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಎಲ್ಲರ ನೆನೆಕೆ ಅಗತ್ಯ.
ಪ್ರಾರಂಭಮಾಡಿದಾಗ ಬಹುತೇಕ ಗೆಳೆಯರು ಮೂರು ತಿಂಗಳು ನಡೆದರೆ ಹೆಚ್ಚು. ಯಾರು ಆನ್ ಲೈನ್ ನ್ಯೂಸ್ ಪೋರ್ಟಲ್ ಓದುತ್ತಾರೆ ಎಂದು ಹಿಯಾಳಿಸಿದ್ದರು. ಆನ್ ಲೈನ್ ನ್ಯೂಸ್ ಪೋರ್ಟಲ್ ಗೆ ಹಣ ಎಲ್ಲಿಂದ ಬರುತ್ತೆ ನಡೆಸುವುದು ತುಂಬಾ ಕಷ್ಟ ಅಂತ ಹೇಳಿದವರೇ ಹೆಚ್ಚು.
ನನಗೆ ವೆಬ್ ಪತ್ರಿಕೆ ನಡೆಸ ಬೇಕು ಎಂಬ ಛಲ ಬಿಟ್ಟರೆ ಇನ್ನೇನು ಇರಲಿಲ್ಲ. ಏಕೆಂದರೆ ಅಕ್ಷರ ಜೋಡಿಸುವುದರಿಂದ “ವಿಮೋಚನಾ ಪತ್ರಿಕೆ” ನಡೆಸಿದ್ದೆ, ರಾಜ್ಯ ಮಟ್ಟದ ವಾರ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೆ. ಟಿವಿ ಮಾಧ್ಯಮದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಇಷ್ಟೆಲ್ಲಾ ಇದ್ದರೂ ವೆಬ್ ಪತ್ರಿಕೆ ನಡೆಸಬೇಕೆಂಬ ಹಟದಿಂದ ಪ್ರಾರಂಭ ಮಾಡಿದ ಬಿಸಿ ಸುದ್ದಿ ನೋಡು ನೋಡುತ್ತಿದ್ದಂತೆ ಸತತವಾಗಿ 8 ವರ್ಷ ತುಂಬಿ 9 ನೇ ವಸಂಕ್ಕೆ ಕಾಲಿಡುತ್ತಿದೆ. ಅಂದರೆ ಆಶ್ಚರ್ಯವಾಗುತ್ತದೆ.
ಆರ್ಥಿಕವಾಗಿ ಬಿಸಿ ಸುದ್ದಿಗೆ ಕಂಪನಿಗಳ ಜೊತೆಗೆ ಟ್ರೈಯಪ್ ಮಾಡಿಕೊಂಡಿದ್ದು. ಇಂದು ಡೈಲಿ ಹಂಟ್ ಎಂಬ ಕಂಪನಿಯಲ್ಲಿ ಬಿಸಿ ಸುದ್ದಿಗೆ 1ಲಕ್ಷದ 62 ಸಾವಿರ ಮಂದಿ ಫಾಲೋ ಇದೆ. ದಿನಕ್ಕೆ ಕನಿಷ್ಟ ಅಂದ್ರೆ 50 ರಿಂದ 60 ಸಾವಿರ ಓದುಗರು ನಮ್ಮ ಸುದ್ದಿಗಳನ್ನು ಓದುತ್ತಾರೆ. ಜಿಯೋ ನ್ಯೂಸ್ ಹೀಗೆ ಹಲವು ಕಂಪನಿಗಳಲ್ಲಿ ಟ್ರೈಯಪ್ ಮಾಡಿಕೊಂಡು ಮುಂದುವರೆಯುತ್ತಿದೆ. ಹಾಗಾಗಿ ಸದಾಕಾಲ ಓದುಗರಿಗೂ ಹಾಗೂ ಜಾಹೀರಾತುದಾರರ ಹಾರೈಕೆ ಸದಾ ಇರಲಿ ಎಂದು ಆಶಿಸುತ್ತಾ….
- ಸಂ
- ಚಳ್ಳಕೆರೆ ಬಸವರಾಜ
- 9916881352