ಹೊಸಪೇಟೆ : ನಗರ ವಿಭಾಗದ 110/11 ಕೆವಿ ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕೆಲಸ ಮತ್ತು ಇತರೆ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿAದ ಆ.8ರಂದು ಬೆಳಿಗ್ಗೆ 10ಗಂಟೆಯಿAದ ಮಧ್ಯಾಹ್ನ 2ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್ ನಾಯ್ಕ ಅವರು ತಿಳಿಸಿದ್ದಾರೆ.
11ಕೆವಿ ಫೀಡರ್‌ಗಳಾದ ಎಂಪಿ ಪ್ರಕಾಶ, ಸಂಕ್ಲಾಪುರ, ಎನ್‌ಸಿ ಕಾಲೋನಿ, ಬಸವನ ದುರ್ಗಾ(ಎನ್‌ಜೆವೈ), ಜೆವಿಎಸ್‌ಎಲ್ ಫೀಡರ್ ವ್ಯಾಪ್ತಿಗೆ ಒಳಪಡುವ ಅಂಚಿನಗುಡಿ, ಕೊಂಡನಾಯಕನ ಹಳ್ಳಿ, ಅನಂತಶಯನಗುಡಿ, ಸಂಕ್ಲಾಪುರ ಇಂಡಸ್ಟಿçಯಲ್ ಏರಿಯಾ, ಕರ್ನಾಟಕ ಆಯಿಲ್ ಫ್ಯಾಕ್ಟರಿ ಏರಿಯಾ, ಕಾರಿಗನೂರು, ಎನ್‌ಸಿ ಕಾಲೋನಿ, ಗಾಂಧಿ ಕಾಲೋನಿ, ಗೋಕುಲ ನಗರ, ನಿಶಾನಿ ಕ್ಯಾಂಪ್, ಬಸವನದುರ್ಗಾ, ಹೊಸೂರು, ಬೆಳಗೋಡು ಮತ್ತು ಹಾನಗಲ್ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.