ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯ ಡಿಆರ್ಡಿಒ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ನೇರವಾಗಿ ಒನಕೆ ಓಬ್ಬವ ಕ್ರೀಡಾಂgಣಕ್ಕೆ ಹೆಲಿಕಾಫ್ಟರ್ ಮೂಲಕ ನಗರದಲ್ಲಿ ಆಯೋಜಿಸಿರುವ ಬಿಜೆಪಿ ಸಮಾವೇಶದ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದರು.
ಪ್ರಧಾನ ಮಂತ್ರಿಗಳನ್ನು ಬಿಜೆಪಿಯ ಶಾಸಕರು, ಸಂಸದರು ಮತ್ತು ಬಿಜೆಪಿ ಅಭ್ಯರ್ಥಿಗಳು ಬರಮಾಡಿಕೊಂಡಿದ್ದಾರೆ. ಈ ವೇಳೆ ಹಿರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಹೂವಿನ ಹಾರ ಹಾಕಿ, ಪೇಟ ತೊಡಿಸಿ, ಮೋದಿಗೆ ಅವರ ತಾಯಿ ಹಣೆಗೆ ಕುಂಕುಮ ಹಚ್ಚುತ್ತಿರುವ ಫೋಟೋವನ್ನು ಸ್ಮರಣಿಕೆಯನ್ನಾಗಿ ನೀಡಿ ಗೌರವಿಸಿದ್ದಾರೆ.
ತಮಟೆ ಬಾರಿಸುವ ಮೂಲಕ ಸಮಾವೇಶ ಉದ್ಘಾಟಿಸಿ ಕನ್ನಡದಲ್ಲೇ ಮಾತು ಆರಂಭಿಸಿದರು. ಅವರು ಮಾತನಾಡಿದ ಮುಖ್ಯಾಂಶಗಳು ಹೀಗಿವೆ.!
7 ಸುತ್ತಿನ ಕೋಟೆ ರೀತಿ 7 ಸುರಕ್ಷಾ ಕೋಟೆ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಮೊದಲನೆಯದು ಪಿಎಂ ಆವಾಸ್ ಯೋಜನೆ, ಗ್ಯಾಸ್, ನೀರು. ಎರಡನೇ ಯೋಜನೆ ಪ್ರತಿ ಮನೆಗು ರೇಷನ್, ಮೂರನೆ ಯೋಜನೆ ಆಯುಷ್ ಮಾನ್ ಭಾರತ್ ಯೋಜನೆ. ನಾಲ್ಕನೇದು ಮುದ್ರಾ ಯೋಜನೆ, ಐದನೇ ಯೋಜನೆ ಬೀಮಾ ಯೋಜನೆ, ಆರನೇ ಯೋಜನೆ ಮಹಿಳೆಯರಿಗೆ ಸುರಕ್ಷೆ, ಏಳನೇದಾಗಿ ಜನದನ್ ಯೋಜನೆ ಜಾರಿಗೆ ತಂದಿದ್ದೇವೆ.
ಕಾಂಗ್ರೆಸ್ ಯಾವತ್ತು ಕೂಡ ಬಿಜೆಪಿಯ ಅಭಿವೃದ್ಧಿ ಬಗ್ಗೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಕೇವಲ 9 ವರ್ಷಗಳಲ್ಲಿ ಸಾಕಷ್ಟು ಮೆಡಿಕಲ್ ಕಾಲೇಜ್ ಪ್ರಾರಂಭಿಸಿದ್ದೇವೆ. ಚಿತ್ರದುರ್ಗದಲ್ಲೂ ಕೂಡ ಮೆಡಿಕಲ್ ಕಾಲೇಜ್ ಆರಂಭ ಮಾಡಿದ್ದೇವೆ. ಕೇಂದ್ರ ಸರ್ಕಾರದಿಂದ ನರ್ಸಿಂಗ್ ಕಾಲೇಜ್ ಆರಂಭ ಮಾಡಿದ್ದೇವೆ ಎಂದರು.
ಎಸ್ಸಿ, ಎಸ್ಟಿ ವರ್ಗಕ್ಕೆ ಮತ್ತು ಒಬಿಸಿ ಸಮುದಾಯಕ್ಕೆ ಡಬಲ್ ಇಂಜಿನ್ ಸರ್ಕಾರದ ಅಡಿ ಅನೇಕ ಯೋಜನೆ ನೀಡಿದ್ದೇವೆ. ಆದಿವಾಸಿಗಳಿಗೆ ಅನೇಕ ಉತ್ತಮ ಯೋಜನೆ ನೀಡಿದ್ದೇವೆ. ಬಂಜಾರ ಮತ್ತು ಲಂಬಾಣಿ ಸಮುದಾಯದವರಿಗೆ ಹಕ್ಕುಪತ್ರ ನೀಡಿದ್ದೇವೆ. ಭೂಮಿ ಇಲ್ಲದವರಿಗೆ ಭೂಮಿ ನೀಡಿದ್ದೇವೆ. ಮಕ್ಕಳಿಗೆ ಸ್ಕಾಲರ್ಶಿಪ್ ನೀಡಿದ್ದೇವೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಲ್ಲಿ ಯೋಜನೆಗಳು ನಿದಾನಗತಿಯಲ್ಲಿ ನಡೆಯುತ್ತಿತ್ತು. ಡಬಲ್ ಇಂಜಿನ್ ಸರ್ಕರ ಅಧಿಕಾರಕ್ಕೆ ಬಂದಮೇಲೆ ರೈಲು, ರಸ್ತೆ, ಏರ್ಪೋಟ್ ನಿರ್ಮಾಣಕ್ಕೆ ವೇಗ ನೀಡಿದ್ದೇವೆ. ಕರ್ನಾಟಕದಲ್ಲಿ 9 ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡುತ್ತೇವೆ. ಚಿತ್ರದುರ್ಗದಲ್ಲೂ 1 ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡುತ್ತೇವೆ. ಇದರಿಂದ ಯುವಕರಿಗೆ ಕೆಲಸ ದೊರೆಯುತ್ತದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ದುರಾಡಳಿತಕ್ಕೆ ಉದಾಹರಣೆ ಅಪರ್ ಭದ್ರಾ ಯೋಜನೆಯನ್ನು ನಿರ್ಲಕ್ಷಿಸಿದ್ದವು. ನಾವು ಇದಕ್ಕೆ ಚಾಲನೆ ನೀಡಿದ್ದೇವೆ. ಇದರಿಂದ ಚಿತ್ರದುರ್ಗ ಜಿಲ್ಲೆಗೆ ನೀರು ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ವಾಣಿವಿಲಾಸ ಜಲಾಶಯವನ್ನು ಅಭಿವೃದ್ದಿ ಮಾಡುತ್ತೇವೆ ಎಂದರು.