ಬೆಂಗಳೂರು: ಜನರ ನಂಬಿಕೆ ಹುಸಿ ಮಾಡುವುದಿಲ್ಲ. ನಾನು ಘೋಷಿಸಿದಂತ ಐದು ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಅನುಮೋದಿಸಿ, ಆದೇಶ ಹೊರಡಿಸಲಾಗುತ್ತದೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇದು 7 ಕೋಟಿ ಕನ್ನಡಿಗರ ಗೆಲುವು. ಬರೀ ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ಗೆಲುವಷ್ಟೇ ಅಲ್ಲ, 7 ಕೋಟಿ ಕನ್ನಡಿಗರ ಗೆಲುವು. ಬಿಜೆಪಿ ಯಾವತ್ತೂ ಜನರ ಆಶೀರ್ವಾದ ಪಡೆದು ಅಧಿಕಾರ ನಡೆಸಲಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು. ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಆಗಿದೆಯೋ ಆ ಎಲ್ಲಾ ಸಂದರ್ಭಗಳಲ್ಲಿ ಕೂಡ, ಸುಭದ್ರ ಸರ್ಕಾರ ಕೊಡಲಿಕ್ಕೆ ಸಾಧ್ಯವಾಗಿಲ್ಲ ಎಂದರು.
ಜನರಿಗೆ ನಮ್ಮ ಆಡಳಿತದ ಬಗ್ಗೆ ಒಂದು ರೀತಿ ಗೌರವ ಬಂದಿತ್ತು. ಅದೇ ನೀವೆ ನೋಡಿ ಬಿಜೆಪಿ, ಕುಮಾರಸ್ವಾಮಿ ಯಾವಾಗ ಯಾವ ಇತ್ತು ಅವಾಗ ಸುಭದ್ರ ಸರ್ಕಾರವಿರಲಿಲ್ಲ. ಅದಕ್ಕಾಗಿ ಈ ರಾಜ್ಯದ ಜನರು ಒಂದು ಪಕ್ಷಕ್ಕೆ ಬಹುಮತ ಕೊಡುವುದಾಗಿದೆ. ಅದಕ್ಕೋಸ್ಕರ ಬದಲಾವಣೆಯನ್ನು ಬಯಸಿ ಇನ್ನೊಂದು ಅವಕಾಶವನ್ನು ಕಾಂಗ್ರೆಸ್ ಗೆ ಕೊಡೋಣ ಅಂತ ಹೇಳಿ ನಮಗೆ ಕೊಟ್ಟಿದ್ದಾರೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತೇವೆ. ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಸುತ್ತೇವೆ. ಕೊಟ್ಟ ಮಾತುಗಳನ್ನು ಈಡೇರಿಸುವಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.