ಗದಗ್: ಗದಗ್‌ನ ನರೇಗಲ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಗಿಬಿದ್ದಿದ್ದಾರೆ.
ದೇಶಕ್ಕೆ ಏನು ಮಾಡಿದ್ದೀರಿ ಹೇಳಿ, ನಿಮ್ಮ ಕೊಡುಗೆ ಏನು? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ದಂಗೆ ಆಗುತ್ತದೆ ಎಂದು ಹೇಳೋದು. ಈ ಮೂಲಕ ಕರ್ನಾಟಕದ ಜನರಿಗೆ ಶಾ ಅಪಮಾನ ಮಾಡಿದ್ದಾರೆ ಎಂದರು.
ಹಾಗಾದ್ರೆ ದೇಶಕ್ಕಾಗಿ ನಿಮ್ಮ ಮನೆಯಲ್ಲಿ ಒಂದು ನಾಯಿಯೂ ಸತ್ತಿಲ್ಲʼ ಎಂದು ಈ ಹಿಂದೆ ಕೊಟ್ಟಿದ್ದ ಹೇಳಿಕೆಯನ್ನೇ ಖರ್ಗೆ ಪುನರುಚ್ಚರಿಸಿದ್ದಾರೆ.