ಬೆಂಗಳೂರು: ಮುಯ್ಯಿ/ಉಡುಗೊರೆ ಹಣದೊಂದಿಗೆ 1 ರೂ ಸೇರಿಸಿ, 51, 101, 501 ಹೀಗೆ ಕೊಡುತ್ತೇವೆ. ಏಕೆಂದರೆ, 50, 100 ಈ ರೀತಿಯ ಸಂಖ್ಯೆಗಳನ್ನು ಇತರ ಅಂಕೆಗಳಿಂದ ವಿಭಜಿಸಬಹುದು.
ಆದರೆ 51, 101 ರೀತಿಯ ಸಂಖ್ಯೆಗಳನ್ನು ಭಾಗಿಸಲಾಗುವುದಿಲ್ಲ. ನಮ್ಮ ಸಂಬಂಧ ವಿಭಜಿಸಲ್ಪಡದೇ ಇರಲಿ ಎಂಬುದು ಇದರ ಉದ್ದೇಶ. ಹಾಗೆಯೇ 50, 100 ರೂ.ಗಳ ಕೊನೆಯ ಅಂಕಿ ಶೂನ್ಯವಾಗಿದ್ದು, ಇದು ಮುಕ್ತಾಯದ ಸೂಚಕ.
ಇದಕ್ಕೆ 1 ರೂ ಸೇರಿಸಿದರೆ, ಅದು 51, 101 ಆಗಿ, ಕೊನೆಯ ಅಂಕೆ 1 ಆರಂಭ ಸೂಚಕ. ಸಂಬಂಧ ಕೊನೆಯಾಗದಿರಲಿ ಎಂಬುದು ಇದರ ಉದ್ದೇಶವಂತೆ.!