ಪಶ್ಚಿಮ ಬಂಗಾಳ: ಧರ್ಮ ಧರ್ಮಗಳ ನಡುವೆ ಹರಡುತ್ತಿರುವ ಬಿಜೆಪಿಯ ದ್ವೇಷವನ್ನು ತಡೆಯಲು ಎಲ್ಲರೂ ಒಂದಾಗಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ವಿಪಕ್ಷಗಳೆಲ್ಲ ಒಗ್ಗೂಡಿದರೆ ಕೇಂದ್ರದಲ್ಲಿ ಬಿಜೆಪಿ ಸೋಲು ಖಚಿತ ಎಂದಿದ್ದಾರೆ.
ದೇಶವನ್ನು ಒಡೆಯುವ ಶಕ್ತಿಗಳನ್ನು ಹತ್ತಿಕ್ಕಲು ವಿಪಕ್ಷಗಳ ಒಗ್ಗಟ್ಟು ಒಂದೇ ದಾರಿ. ಬಿಜೆಪಿ ಇತಿಹಾಸ ಬದಲಾಯಿಸುವುದನ್ನು ಮತ್ತು NRCಯಿಂದ ಜನರಿಗೆ ಅನ್ಯಾಯ ಮಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ ಎಂದು ಟೀಕಿಸಿದ್ದಾರೆ.