ಗದಗ: ಮತ್ತೊಮ್ಮೆ ಸಿಎಂ ಆಗುವ ಮನದಾಸೆ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಯತ್ನಾಳ್, ನನಗೂ ಸಿಎಂ ಆಗ್ಬೇಕು ಅನಿಸುತ್ತೆ.. ಆಗಬಾರದಾ?, ನಾನೇನು ಅಯ್ಯೋಗ್ಯನೇ?’ ಎಂದಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ‘ಅವಕಾಶ ಕೊಟ್ಟರೆ ಆಗುವೆ, ನನ್ನ ಆಡಳಿತ ಬಂದರಂತೂ ಉತ್ತರ ಪ್ರದೇಶದ ಯೋಗಿಯಂತೆ ಬರುತ್ತದೆ’ ಎಂದಿದ್ದಾರೆ.
ಕೆಲವರು ತಮ್ಮ ಬಳಿಕ ಮಗನೆ ಸಿಎಂ ಆಗಬೇಕೆಂದು ನನ್ನ ಪಂಜರದಲ್ಲಿಟ್ಟಿದ್ದರು, ಆದರೆ ನನ್ನ ಶಕ್ತಿ ತಿಳಿದು ಅದನ್ನು ಉಪಯೋಗಿಸಿಕೊಳ್ಳಲು ಮೋದಿ-ಶಾ ಹೊರಗಡೆ ತಂದರು ಎಂದಿದ್ದಾರೆ.