ಹರ್ಯಾಣ: ಅಂತ್ಯಕ್ರಿಯೆಗೆಂದು ಮಧ್ಯಾಹ್ನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೇರ್ಗಢ ಗ್ರಾಮದ ಬಳಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿರುವ ಘಟನೆ ಹರ್ಯಾಣದ ಸಿರ್ಸಾ ಜಿಲ್ಲೆಯ ದಬ್ವಾಲಿಯಲ್ಲಿ ನಡೆದಿದೆ.
ಮೃತಪಟ್ಟ ಐವರು ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಡಬ್ವಾಲಿಯ ಉಪವಿಭಾಗೀಯ ಸಿವಿಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರನ್ನು ರಾಜಸ್ಥಾನದ ಶ್ರೀಗಂಗಾನಗರದ ರಾಮದೇವ್ ಕಾಲೋನಿಯ ನಿವಾಸಿ ಬನ್ವಾರಿ ಲಾಲ್ ವರ್ಮಾ, ಅವರ ಪತ್ನಿ ದರ್ಶನಾ, ಅಣ್ಣ ಕೃಷ್ಣಕುಮಾರ್, ಅವರ ಪತ್ನಿ ಗುದ್ದಿದೇವಿ, ಎರಡನೇ ಸಹೋದರ ಓಂಪ್ರಕಾಶ್ ಅವರ ಪತ್ನಿ ಚಂದ್ರಕಲಾ, ಕಾರು ಚಾಲಕ ಎಂದು ಗುರುತಿಸಲಾಗಿದೆ.
				
															
                    
                    
                    
                    
































