ವಾಷಿಂಗ್ಟನ್: ಅಮೆರಿಕದಾದ್ಯಂತ ಯೂನಿರ್ವಸಿಟಿಗಳಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳು ತೀವ್ರಗೊಂಡಿದ್ದು,ನ್ಯೂಯಾರ್ಕ್‌ಸಿಟಿ
ಪೊಲೀಸರು ಕೊಲಂಬಿಯಾ ಯೂನಿರ್ವಸಿಟಿ ಮತ್ತು ಸಿಟಿ ಕಾಲೇಜಿನ ಸುಮಾರು 300 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಕ್ಯಾಲಿಫೋರ್ನಿಯಾ ಯೂನಿರ್ವಸಿಟಿಯಲ್ಲಿ ಘರ್ಷಣೆ ನಡೆದಿದ್ದು, 15 ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇತ್ತೀಚೆಗೆ ಯೂನಿರ್ವಸಿಟಿ ಆವರಣದಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಿಸಿ ಪ್ರತಿಭಟನೆ ನಡೆಯುತ್ತಿರುವುದು ಹೆಚ್ಚಳವಾಗುತ್ತಿದೆ. ತಕ್ಷಣವೇ ಗಾಜಾ ಯುದ್ಧ ನಿಲ್ಲಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಪ್ಯಾಲೆಸ್ತೀ ನ್ ಪರ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಮತ್ತೊಂದೆಡೆ ಪ್ರತಿಭಟನೆ ಇತರ ದೇಶಗಳಿಗೂ ವಿಸ್ತರಣೆಯಾಗ ತೊಡಗಿದೆ ಎಂದು ವರದಿ ತಿಳಿಸಿದೆ.
ಮ್ಯಾನ್ ಹಟ್ಟನ್ ನ ಫೋರ್ದಾಮ್ ಯೂನಿರ್ವಸಿಟಿಯೊಳಗೆ ಆಗಮಿಸಿರುವ ನ್ಯೂಯಾರ್ಕ್‌ಪೊಲೀಸ್ ಅಧಿಕಾರಿಗಳು ಆವರಣದೊಳಗೆ ತಾತ್ಕಾಲಿಕ ಟೆಂಟ್ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಿರುವುದಾಗಿ ವರದಿ ವಿವರಿಸಿದೆ