ಕಾನ್ಸಾಸ್ ಸಿಟಿ ಅಮೇರಿಕಾದಲ್ಲಿ ಕಾನ್ಸಾಸ್ ಸಿಟಿಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟು, ಮಕ್ಕಳು ಸೇರಿದಂತೆ ಸುಮಾರು 21 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಕಾನ್ಸಾಸ್ ಸಿಟಿಯಲ್ಲಿ ನಡೆಯುತಿದ್ದ ಸೂಪರ್ ಬೌಲ್ ವಿಜಯೋತ್ಸವದ ರ‍್ಯಾಲಿ ನಡೆಯುತ್ತಿದ್ದ ವೇಳೆ ಸಾಮೂಹಿಕ ಗುಂಡಿನ ದಾಳಿ ನಡೆದಿದೆ ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು ಎನ್ನಲಾಗಿದೆ.
ಇನ್ನು ಗುಂಡಿನ ದಾಳಿಗೆ ರ‍್ಯಾಲಿಯಲ್ಲಿ ಡಿಜೆಯಾಗಿದ್ದ ಲಿಸಾನ ಲೋಪೆಜ್ ಗಾಲ್ವಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಉಳಿದಂತೆ ಹನ್ನೆರಡು ಮಕ್ಕಳು ಸೇರಿದಂತೆ ಇಪ್ಪತ್ತಮೂರು ಮಂದಿಗೆ ಗುಂಡಿನ ದಾಳಿಗೆ ಗಾಯಗಳಾಗಿದೆ.
ಗುಂಡಿನ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.