ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯ ವಿವಿಧ ವೃತ್ತಗಳಲ್ಲಿ ಖಾಲಿರುವ 540 ‘ಗಸ್ತು ಅರಣ್ಯ ಪಾಲಕ ಅಥವಾ ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಹ ಪುರುಷ, ಮಹಿಳಾ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಇದೇ ಡಿಸೆಂಬರ್ 30 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನ.
ಅರಣ್ಯ ಪಾಲಕ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 9 ತಿಂಗಳು ಮೂಲ ತರಬೇತಿ ಇರುತ್ತದೆ. ತರಬೇತಿ ಅವಧಿಯೂ ಸೇರಿದಂತೆ 36 ತಿಂಗಳು ಪ್ರೊಬೇಷನರಿ ಅವಧಿ ಇರುತ್ತದೆ. ಅಲ್ಲದೇ ಆಯ್ಕೆಯಾಗುವ ಅಭ್ಯರ್ಥಿಗಳು ತಮ್ಮ ಹುದ್ದೆಗಳಲ್ಲಿ ಕನಿಷ್ಠ ಐದು ವರ್ಷ ಕೆಲಸ ಮಾಡಬೇಕು. ಹೆಚ್ಚಿನ ಮಾಹಿತಿಗೆ ಅರಣ್ಯ ಇಲಾಖೆಯ aranya.gov.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.































