ಗುವಾಹಟಿ: ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಬಜರಂಗದಳದ ಇಬ್ಬರು ಸದಸ್ಯರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಲ್ಡೊಯಿಯಲ್ಲಿರುವ ಮಹರ್ಷಿ ವಿದ್ಯಾ ಮಂದಿರ ಶಾಲೆಯ ಆವರಣದಲ್ಲಿ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ಬಜರಂಗದಳದ ಇಬ್ಬರು ಸದಸ್ಯರಾದ ಬಿಜೋಯ್ ಘೋಷ್ ಮತ್ತು ಗೋಪಾಲ್ ಬೋರೊ ಅವರನ್ನು ಬಂಧಿಸಲಾಗಿದೆ ಎಂದು ದರ್ರಾಂಗ್ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸೋನೊವಾಲ್ ಪಿಟಿಐಗೆ ತಿಳಿಸಿದ್ದಾರೆ. ಕೋರ್ಟ್ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಶಾಲೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರದಲ್ಲಿ ಭಾಗಿಯಾಗಿರುವ ಇತರರನ್ನು ಬಂಧಿಸಲು ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ. ಶಸ್ತ್ರಾಸ್ತ್ರ ತರಬೇತಿ ಶಿಬಿರಕ್ಕೆ ಅನುಮತಿ ನೀಡಿದ ಆರೋಪದ ಮೇಲೆ ಕಳೆದ ಮಂಗಳವಾರ ಶಾಲೆಯ ಪ್ರಾಂಶುಪಾಲರಾದ ಹೇಮಂತ ಪಯೆಂಗ್ ಮತ್ತು ಶಾಲೆಯ ಆಡಳಿತಾಧಿಕಾರಿ ರತನ್ ದಾಸ್ ಅವರನ್ನು ಬಂಧಿಸಲಾಗಿದೆ ಎಂದು ಸೋನೊವಾಲ್ ಅವರು ತಿಳಿಸಿದ್ದಾರೆ. “ಪಯೆಂಗ್ ಮತ್ತು ದಾಸ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ನಾವು ಪ್ರಸ್ತುತ ಸಂಘಟನೆಯ ಇತರ ಸದಸ್ಯರನ್ನು ಹುಡುಕುತ್ತಿದ್ದೇವೆ” ಎಂದು ಎಸ್ಪಿ ಹೇಳಿದ್ದಾರೆ.
[vc_row][vc_column]
BREAKING NEWS
- ವಂಚನೆ ಪ್ರಕರಣ: ಆರೋಪಿ ಚೈತ್ರಾ ಕುಂದಾಪುರ, ಶ್ರೀಕಾಂತ್ಗೆ ಜಾಮೀನು
- ಪ್ರಾಂಜಲ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಚೆಕ್ ಇಂದು ಹಸ್ತಾಂತರ: ಸಿಎಂ
- ತೆಲಂಗಾಣ ಸಿಎಂ ಆಯ್ಕೆ ತೀರ್ಮಾನ ಎಐಸಿಸಿ ಅಧ್ಯಕ್ಷರ ಹೆಗಲಿಗೆ: ಡಿಕೆಶಿ
- ಮಿಚಾಂಗ್ ಅಬ್ಬರಕ್ಕೆ ಮುಳುಗಿದ ಚೆನ್ನೈ
- ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ – ಬೆಂಗಳೂರು ಸೇರಿ ರಾಜ್ಯದ 63 ಕಡೆ ದಾಳಿ
- 200 ಟನ್ ಮೆಕ್ಕೆಜೋಳ ಕುಸಿತ ಪ್ರಕರಣ: ಮೂವರು ಕಾರ್ಮಿಕರ ಸಾವು
- ಬ್ರೇಕಿಂಗ್ ಇಂದು ಬೆಳ್ಳಂಬೆಳಗ್ಗೆ 63 ಕಡೆ ಲೋಕಾಯುಕ್ತ ದಾಳಿ.!
- ತಡರಾತ್ರಿ ಫುಡ್ಸ್ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಮೆಕ್ಕೆಜೋಳ ಕುಸಿತ ಮೂವರು ಸಾವು.!
- ಮಿಚಾಂಗ್ ಚಂಡಮಾರುತ ಎಫೆಕ್ಟ್ ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆ.!
- ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ