ಹೈದರಾಬಾದ್: ತೆಲಂಗಾಣದಲ್ಲಿರುವ ಕರೀಂನಗರದ ವೀಣವಂಕ ಮಂಡಲದ ಬೇಟಿಗಲ್ ಗ್ರಾಮದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತನೋರ್ವನನ್ನು ಪೊಲೀಸ್ ಸಿಬ್ಬಂದಿ ತನ್ನ ಹೆಗಲ ಮೇಲೆ ಹೊತ್ತು ಸುಮಾರು 2 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ರೈತನ ಜೀವ ಉಳಿಸಿರುವ ಘಟನೆ ನಡೆದಿದೆ.
ರೈತನೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಜಮೀನಿನಲ್ಲಿ ಕೀಟನಾಶಕ ಸೇವಿಸಿದ್ದಾನೆ. ಈ ವೇಳೆ ಅಕ್ಕಪಕ್ಕದ ರೈತರು ಆತನ ಸ್ಥಿತಿಯನ್ನು ಗಮನಿಸಿ ಪೊಲೀಸ್ ಠಾಣೆ ಹಾಗೂ ತುರ್ತು ಸೇವೆಗೆ ಮಾಹಿತಿ ನೀಡಿದ್ದಾರೆ.
ಇನ್ನು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದರೂ ತುರ್ತು ವಾಹನ ಮಾತ್ರ ಬರಲಿಲ್ಲ, ಈ ವೇಳೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಜಯಪಾಲ್ ವಿಷ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೈತನ ಸ್ಥಿತಿ ಕಂಡು ಕೂಡಲೇ ಆತನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೊಲ ಗದ್ದೆಗಳಲ್ಲಿ ಸುಮಾರು ಎರಡು ಕಿಲೋಮೀಟರ್ ದೂರ ಸಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ