ಕೊರಿಯಾ: ಆಸ್ಕರ್ ವಿಜೇತ ಚಲನಚಿತ್ರ ಪ್ಯಾರಾಸೈಟ್‌ನಲ್ಲಿನ ನಟನೆಗಾಗಿ ಜಾಗತಿಕ ಮನ್ನಣೆಯನ್ನು ಗಳಿಸಿದ್ದ ದಕ್ಷಿಣ ಕೊರಿಯಾದ ನಟ ಲೀ ಸನ್ ಕ್ಯುನ್ ,ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಕೊರಿಯಾದ ಸುದ್ದಿ ಸಂಸ್ಥೆ ಯೋನ್‌ಹಾಪ್ ವರದಿ ಪ್ರಕಾರ , ಸ್ಥಳೀಯ ಕಾಲಮಾನ ಬುಧವಾರ ಬೆಳಗ್ಗೆ ಸಿಯೋಲ್‌ನ ಉದ್ಯಾನವನದಲ್ಲಿ ಕಾರಿನೊಳಗೆ ಲೀ ಶವವಾಗಿ ಪತ್ತೆಯಾಗಿದ್ದಾರೆ.
48 ವರ್ಷದ ಲೀ ಸನ್ ಕ್ಯುನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಿನಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ಲೀ ಸನ್-ಕ್ಯೂನ್ ಅವರು ಅಕ್ರಮ ಮಾದಕವಸ್ತು ಬಳಕೆಯ ಆರೋಪದ ಮೇಲೆ ತನಿಖೆಗೆ ಹಾಜರಾದ ನಂತರ ಸುದ್ದಿಯಲ್ಲಿದ್ದರು.
ಲೀ ಸನ್-ಕ್ಯೂನ್ 1975 ರಲ್ಲಿ ಜನಿಸಿದರು. ‘ಪ್ಯಾರಾಸೈಟ್’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರು ‘Helpless’, ‘ಆಲ್ ಅಬೌಟ್ ಮೈ ವೈಫ್’ ಮತ್ತು ಹಲವಾರು ಗಮನಾರ್ಹ ಸಿನಿಮಾಗಳು ಸೇರಿದಂತೆ ದಕ್ಷಿಣ ಕೊರಿಯಾದ ಅನೇಕ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಲೀ ಆಪಲ್ ಟಿವಿ + ನ ಮೊದಲ ಕೊರಿಯನ್ ಆರ್ಗಿನಲ್ ಸರಣಿಯ ‘ಡಾ ಬ್ರೈನ್’ ನ ಭಾಗವಾಗಿದ್ದರು. ಇದು ಆರು ಕಂತುಗಳ ವೈಜ್ಞಾನಿಕ ಥ್ರಿಲ್ಲರ್ ಆಗಿದ್ದು, ಇದು 2021 ರಲ್ಲಿ ಬಿಡುಗಡೆಯಾಯಿತು.